alex Certify ಲಾಕ್ ‌ಡೌನ್ ಬಳಿಕ ನಡೆದಿದೆ ದಿವ್ಯಾಂಗರ ಮೊದಲ ಸಂಗೀತ ಕಚೇರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ‌ಡೌನ್ ಬಳಿಕ ನಡೆದಿದೆ ದಿವ್ಯಾಂಗರ ಮೊದಲ ಸಂಗೀತ ಕಚೇರಿ

Visually-impaired Women Hold Their First Orchestra Concert since Lockdown in Egypt

ದಿವ್ಯಾಂಗ ಮಹಿಳೆಯರೇ ನಡೆಸಿಕೊಂಡು ಹೋಗುತ್ತಿರುವ ಈಜಿಪ್ಟ್‌ನ ಅಲ್ ನೌರ್‌ ವಲ್ ಅಮಲ್‌ ಚೇಂಬರ್‌ ಆರ್ಕೆಸ್ಟ್ರಾಗೆ ಈ ಸಾಂಕ್ರಮಿಕ ಕಾಲಘಟ್ಟದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ.

ಲಾಕ್‌ ಡೌನ್ ಕಾರಣದಿಂದ ಹಲವು ತಿಂಗಳುಗಳ ಮಟ್ಟಿಗೆ ವಾದ್ಯವನ್ನು ನಿಲ್ಲಿಸಿದ್ದ ಈ ತಂಡವು ಮೂರು ವಾರಗಳ ಹಿಂದೆ ತನ್ನ ಮೊದಲ ಕಚೇರಿಯನ್ನು ಕೈರೋದ ಮನಾಸ್ಟರ್ಲಿ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿತ್ತು. ಆರ್ಕೆಸ್ಟ್ರಾದ ಪ್ರತಿಯೊಬ್ಬ ಸದಸ್ಯೆಯೂ ಸಹ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಗಾಯನದ ಕಾರ್ಯಕ್ರಮ ನಡೆಸಿಕೊಟ್ಟಿದೆ.

ನಾಲ್ಕನೇ ತಲೆಮಾರಿನ ಸಂಗೀತಗಾರರ ಗುಚ್ಛವಾದ ಈ ಆರ್ಕೆಸ್ಟ್ರಾ ಆಸ್ಟ್ರಿಯಾ, ಕುವೈತ್‌, ಬ್ರಿಟನ್, ಸ್ಪೇನ್, ಜಪಾನ್, ಗ್ರೀಸ್ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳಲ್ಲಿ ಪ್ರದರ್ಶನ ನೀಡಿದೆ. ಮಾರ್ಚ್‌ನಲ್ಲಿ ಕೋವಿಡ್ ಸಂಬಂಧ ನಿರ್ಬಂಧಗಳನ್ನು ಜಾರಿಗೆ ತಂದಿದ್ದ ಈಜಿಪ್ಟ್‌ ಸರ್ಕಾರ ಇದೀಗ ತನ್ನ ಲಾಕ್ ‌ಡೌನ್ ನಿಯಮಾವಳಿಯನ್ನು ಸಡಿಲಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...