alex Certify ಕೊಹ್ಲಿ ಈ ಸ್ವಭಾವ ಬದಲಿಸಿದ ಪತ್ನಿ ಅನುಷ್ಕಾ ಶರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ ಈ ಸ್ವಭಾವ ಬದಲಿಸಿದ ಪತ್ನಿ ಅನುಷ್ಕಾ ಶರ್ಮಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಆನ್ಲೈನ್ ಸೆಷನ್ ಒಂದರಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಪ್ರಯತ್ನವನ್ನು ಕೊಹ್ಲಿ ಮಾಡಿದ್ರು. ಈ ವೇಳೆ ಕೊಹ್ಲಿ ಅನೇಕ ಸಂಗತಿಗಳನ್ನು ಹಂಚಿಕೊಂಡರು.

ರಾಜ್ಯ ತಂಡದಲ್ಲೂ ನನ್ನ ಆಯ್ಕೆಯಾಗಿರಲಿಲ್ಲ. ಆಗ ತುಂಬಾ ನೋವಾಗಿತ್ತು. ರಾತ್ರಿ ಪೂರ್ತಿ ನಾನು ಅಳುತ್ತಿದ್ದೆ. ಕೋಚ್ ಬಳಿ ಸತತ ಎರಡು ಗಂಟೆಗಳ ಕಾಲ ಪ್ರಶ್ನೆ ಕೇಳಿದ್ದೇನೆ. ಪ್ರಯತ್ನ ಬಿಡದ ಕಾರಣ ಈಗ ಈ ಸ್ಥಾನಕ್ಕೆ ಬಂದಿದ್ದೇನೆಂದು ಕೊಹ್ಲಿ ಹೇಳಿದ್ರು.

ಅನುಷ್ಕಾ ತಮ್ಮ ಜೀವನದಲ್ಲಿ ಬಂದ್ಮೇಲೆ ಸಾಕಷ್ಟು ಬದಲಾವಣೆಯಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ. ಇಬ್ಬರು ಹೊಂದಿಕೊಂಡು ಹೋಗ್ತಿದ್ದೇವೆ. ಅನುಷ್ಕಾರಿಂದ ಸಾಕಷ್ಟು ಕಲಿತಿದ್ದೇನೆ. ಅವ್ರ ಮದುವೆಯಾದ್ಮೇಲೆ ನನ್ನ ಕೋಪ ನಿಯಂತ್ರಣಕ್ಕೆ ಬಂದಿದೆ. ಕಷ್ಟದ ಸಮಯದಲ್ಲಿ ಶಾಂತವಾಗಿರಬೇಕೆಂಬುದನ್ನು ಕಲಿತಿದ್ದೇನೆ. ಹೇಗೆ ಮನಸ್ಸನ್ನು ನಿಯಂತ್ರಿಸಬೇಕೆಂಬುದು ಗೊತ್ತಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...