alex Certify ಫೋಟೋ ಹಂಚಿಕೊಂಡು ಮಗು ಹೆಸರು ಬಹಿರಂಗಪಡಿಸಿದ ಅನುಷ್ಕಾ ಶರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋಟೋ ಹಂಚಿಕೊಂಡು ಮಗು ಹೆಸರು ಬಹಿರಂಗಪಡಿಸಿದ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜನವರಿ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅನುಷ್ಕಾ ಮಗುವಿನ ಮೊದಲ ಫೋಟೋವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಇದಲ್ಲದೆ ವಿರಾಟ್ ಕೊಹ್ಲಿ ಮಗುವಿಗೆ ಏನು ಹೆಸರಿಡಲಾಗಿದೆ ಎಂಬುದನ್ನು ಅನುಷ್ಕಾ ಹೇಳಿದ್ದಾರೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಗಳಿಗೆ ಏನು ಹೆಸರಿಡ್ತಾರೆ ಎಂದು ಅನೇಕ ದಿನಗಳಿಂದ ಚರ್ಚೆಯಾಗ್ತಿತ್ತು. ಈಗ ವಿರುಷ್ಕಾ ಏನು ಹೆಸರಿಟ್ಟಿದ್ದಾರೆಂಬುದು ಬಹಿರಂಗವಾಗಿದೆ. ವಿರುಷ್ಕಾ ಮುದ್ದು ಮಗಳಿಗೆ ವಾಮಿಕಾ ಎಂದು ನಾಮಕರಣ ಮಾಡಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಮಗುವಿನ ಫೋಟೋ ಹಂಚಿಕೊಂಡಿರುವ ಅನುಷ್ಕಾ ತಾಯ್ತನದ ಅನುಭವ ಹಂಚಿಕೊಂಡಿದ್ದಾರೆ.

ಅನುಷ್ಕಾ ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬರ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಕಮೆಂಟ್ ಮಾಡ್ತಿದ್ದಾರೆ. ಅನುಷ್ಕಾ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಈ ಖುಷಿ ಸುದ್ದಿಯನ್ನು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಇದಾದ ನಂತ್ರ ವಿರುಷ್ಕಾ ಆಸ್ಪತ್ರೆಗೆ ಬಂದಿದ್ದ ಫೋಟೋ ವೈರಲ್ ಆಗಿತ್ತು. ಆದ್ರೆ ಈವರೆಗೂ ಮಗುವಿನ ಫೋಟೋವನ್ನು ಹಂಚಿಕೊಂಡಿರಲಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...