alex Certify ನಟನೆಗೆ ಮೂರು ವರ್ಷ ಬ್ರೇಕ್: ರಾಜಕೀಯಕ್ಕೆ ಇಳಯ ದಳಪತಿ ವಿಜಯ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟನೆಗೆ ಮೂರು ವರ್ಷ ಬ್ರೇಕ್: ರಾಜಕೀಯಕ್ಕೆ ಇಳಯ ದಳಪತಿ ವಿಜಯ್…?

ಸೂಪರ್ ಸ್ಟಾರ್ ಇಳಯ ದಳಪತಿ ವಿಜಯ್ ನಟನೆಗೆ ಮೂರು ವರ್ಷ ಬ್ರೇಕ್ ಹಾಕಲಿದ್ದಾರೆ. 2026 ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಅವರು ಅಭಿನಯದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.

‘ಲಿಯೋ’ ಸಿನಿಮಾ ಮುಗಿದ ನಂತರ ವಿಜಯ್ ಮೂರು ವರ್ಷ ನಟನೆಯಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ರಾಜಕೀಯದತತ್ ಗಮನಹರಿಸಲು ಮುಂದಾಗಿರುವ ಅವರು ‘ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಅಭಿಮಾನಿಗಳ ಸಂಘ ಆರಂಭಿಸಿ ರಾಜ್ಯದಾದ್ಯಂತ ಯುವಜನತೆಯನ್ನು ಸಂಘಟಿಸುತ್ತಿದ್ದಾರೆ.

3 ವರ್ಷ ನಟನೆಯಿಂದ ದೂರ ಉಳಿಯಲಿರುವ ಅವರು ರಾಜಕೀಯದಲ್ಲಿ ಸಕ್ರಿಯರಾಗಲಿದ್ದು, ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...