alex Certify ಸುಶಾಂತ್ ಮೃತದೇಹದ‌ ಪೋಸ್ಟ್ ಮಾರ್ಟಂ ಆಗುತ್ತಿದ್ದ ಜಾಗದಲ್ಲಿ ಹಾಜರಿದ್ದ ರಿಯಾ…! ಬಹಿರಂಗವಾಯ್ತು ವಿಡಿಯೋ ಫುಟೇಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಮೃತದೇಹದ‌ ಪೋಸ್ಟ್ ಮಾರ್ಟಂ ಆಗುತ್ತಿದ್ದ ಜಾಗದಲ್ಲಿ ಹಾಜರಿದ್ದ ರಿಯಾ…! ಬಹಿರಂಗವಾಯ್ತು ವಿಡಿಯೋ ಫುಟೇಜ್

ಬಾಲಿವುಡ್ ನಟ ಸುಶಾಂತ್‌ ಸಿಂಗ್ ರಜಪೂತ್‌ ನಿಗೂಢ ಹತ್ಯೆಯ ಬಳಿಕ ದೇಶವಾಸಿಗಳು, ಅದರಲ್ಲೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿರುವ ನಟನ ಗರ್ಲ್‌ಫ್ರೆಂಡ್‌ ರಿಯಾ ಚಕ್ರವರ್ತಿ ಮೇಲೆ ಮತ್ತೊಂದು ಬಲವಾದ ಆಪಾದನೆ ಬಂದಿದೆ.

ಸುಶಾಂತ್‌ ದೇಹದ ಪೋಸ್ಟ್ ಮಾರ್ಟಂ ಮಾಡುತ್ತಿದ್ದ ವೇಳೆ ಅದೇ ಕೂಪರ್‌ ಆಸ್ಪತ್ರೆಯಿಂದ 45 ನಿಮಿಷಗಳ ಬಳಿಕ ರಿಯಾ ಹೊರಬರುತ್ತಿರುವ ವಿಡಿಯೋನ ತುಣುಕೊಂದು ಕಾಣಸಿಗುತ್ತಿದೆ. ಇದೇ ವೇಳೆ ಮತ್ತೊಂದು ವಿಡಿಯೋ ಲೀಕ್ ಆಗಿದ್ದು, ನಿರ್ಮಾಪಕ ಸಂದೀಪ್ ಸಿಂಗ್ ಆ ದಿನದಂದು ಸುಶಾಂತ್‌ ಸಿಂಗ್ ಮನೆಯಲ್ಲಿ ಇದ್ದಿದ್ದನ್ನು ಸಹ ತೋರಲಾಗಿದೆ.

ಇದೇ ವೇಳೆ, ಸುಶಾಂತ್‌ ದೇಹವನ್ನು ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯುವ ವೇಳೆ ಇದೇ ಸಂದೀಪ್ ಸಿಂಗ್ ಪೊಲೀಸರಿಗೆ ಥಂಬ್ಸ್‌ ಅಪ್ ಮಾಡುತ್ತಿರುವುದನ್ನು ಸಹ ನೋಡಬಹುದಾಗಿದೆ.

ತನಿಖೆಯ ಹೊಣೆ ಹೊತ್ತಿರುವ ಸಿಬಿಐ ಅಧಿಕಾರಿಗಳು ಮಹಾರಾಷ್ಟ್ರ ಸರ್ಕಾರ ಅಥವಾ ಮುಂಬಯಿ ಪೊಲೀಸರ ದೃಷ್ಟಿ ತಮ್ಮ ಮೇಲೆ ಬೀಳದೇ ಇರಲೆಂದು ರಕ್ಷಣಾ ಸಚಿವಾಲಯಕ್ಕೆ ಸೇರಿದ ಏರ್‌ಫೋರ್ಸ್ ಅತಿಥಿ ನಿವಾಸದಲ್ಲಿ ತಂಗಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...