ಸ್ಟ್ಯಾಂಡಪ್ ಕಾಮಿಡಿಯನ್ ಫಾರೂಕಿ ಪರ ನಿಂತ ಸ್ಟಾರ್ ಸೆಲೆಬ್ರಿಟಿಗಳು…! 04-01-2021 3:10PM IST / No Comments / Posted In: Latest News, Entertainment ಹಿಂದೂ ದೇವತೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಶನಿವಾರ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವಾರ್ ಫಾರೂಕಿಯನ್ನು ಮಧ್ಯಪ್ರದೇಶದ ಇಂದೋರ್ನಲ್ಲಿ ಬಂಧಿಸಲಾಗಿದೆ. ಇಂದೋರ್ನ ಕೆಫೆಯೊಂದರಲ್ಲಿ ಹಿಂದ್ ರಕ್ಷಕ್ ಸಂಘಟನೆ ಹಾಗೂ ಹಾಸ್ಯ ಕಾರ್ಯಕ್ರಮದ ಸಂಘಟಕರ ನಡುವೆ ಜಗಳವಾಗಿದೆ ಎಂದು ವರದಿಯಾಗಿದೆ. ಹಿಂದೂ ದೇವತೆಗಳ ವಿರುದ್ಧ ಅಶ್ಲೀಲ ಭಾಷೆ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ರಕ್ಷಕ್ ಸಂಘಟನೆ ಮುಖ್ಯಸ್ಥೆ ಹಾಗೂ ಬಿಜೆಪಿ ಶಾಸಕಿ ಮಾಲಿನಿ ಗೌರ್ ಪುತ್ರ ಏಕಲವ್ಯ ಸಿಂಗ್ ಗೌರ್ ದೂರು ಸಲ್ಲಿಸಿದ್ದರು. ಗೌರ್ ಪ್ರಕಾರ, ಗೌರ್ ಹಾಗೂ ಸಹಚರರು ಈ ಕಾರ್ಯಕ್ರಮ ವೀಕ್ಷಣೆಗೆ ತೆರಳಿದ್ದರು ಹಾಗೂ ಕಾರ್ಯಕ್ರಮದಲ್ಲಿ ಅಸಭ್ಯ ಕಮೆಂಟ್ಗಳನ್ನ ಕೇಳಿದ ಬಳಿಕ ಕಾರ್ಯಕ್ರಮವನ್ನ ನಿಲ್ಲಿಸುವಂತೆ ಸಂಘಟಕರಿಗೆ ಒತ್ತಾಯಿಸಿದ್ದರು. ಈ ಘಟನೆ ಸಂಬಂಧ ಫಾರುಕಿ ಸಮೇತ ನಾಲ್ವರನ್ನ ಬಂಧಿಸಲಾಗಿದೆ. ಸ್ಥಳೀಯ ಕೋರ್ಟ್ ಫಾರೂಕಿ ಜಾಮೀನು ಅರ್ಜಿ ತಿರಸ್ಕರಿಸಿ ನ್ಯಾಯಾಂಗ ಬಂಧನದಲ್ಲಿರಿಸಿದೆ. ಈ ನಡುವೆ ಅನೇಕ ಸೆಲೆಬ್ರಿಟಿಗಳು ಸ್ಟಾಂಡ್ ಅಪ್ ಹಾಸ್ಯನಟ ಮುನಾವರ್ ಫಾರೂಕಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಸೆಕ್ರೆಡ್ ಗೇಮ್ಸ್ ನಟಿ ಕುಬ್ರಾ ಸೈಟ್, ಹಾಸ್ಯ ನಟ ವೀರ್ ದಾಸ್, ಬರಹಗಾರ ಹಾಗೂ ಕವಿ ವರುಣ್ ಗ್ರೋವರ್ ಹಾಗೂ ಹಾಸ್ಯನಟ ರೋಹನ್ ಜೋಶಿ ಫಾರೂಕಿ ಅವರನ್ನ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನ ಶೇರ್ ಮಾಡಿದ್ದಾರೆ. ತಮಾಷೆಯಲ್ಲೂ ತಪ್ಪನ್ನ ಹುಡುಕುತ್ತಾರೆ ಎಂದರೆ ನಮ್ಮ ನಾಯಕರು ಎಷ್ಟು ಸೂಕ್ಷ್ಮವಲ್ಲದ ವ್ಯಕ್ತಿತ್ವ ಹೊಂದಿದ್ದಾರೆ ಅನ್ನೋದು ಇದರಲ್ಲೇ ತಿಳಿಯುತ್ತೆ ಅಂತಾ ಕುಬ್ರಾ ಟ್ವೀಟಾಯಿಸಿದ್ದಾರೆ. ನೀವು ನಗು ಹಾಗೂ ತಮಾಷೆಯನ್ನ ತಡೆಹಿಡಿಯೋಕೆ ಸಾಧ್ಯವಿಲ್ಲ. ಕಾಮಿಡಿಯನ್ ಪ್ರದರ್ಶನ ಮಾಡೋದು ಜನರನ್ನ ನಗಿಸೋಕೆ ಎಂದು ವೀರ್ ದಾಸ್ ಬರೆದಿದ್ದಾರೆ. ಮಾತ್ರವಲ್ಲದೇ ಪ್ರಧಾನಿ ಮೋದಿ ಟ್ವೀಟ್ ಒಂದನ್ನ ಶೇರ್ ಮಾಡಿ ಹಾಸ್ಯ ನಮ್ಮ ಜೀವನದಲ್ಲಿ ಸಂತೋಷ ತರುತ್ತದೆ ಎಂದು ಬರೆದುಕೊಂಡಿದ್ದಾರೆ. #MunawarFaruqui how insensitive is our leadership to be sentimental towards jokes? — Kubbra Sait (@KubbraSait) January 3, 2021 A brief account of a person in the audience who attended Munawar Faruqui's stand-up comedy event in Indore, MP. It says: "No derogatory remarks were made by Munawar Faruqui at the Indore Show." pic.twitter.com/XcDiQRON2k — Hussain Haidry (@hussainhaidry) January 3, 2021 You can't stop jokes and laughter. Not because comedians are performing it, but because people need to laugh. Harder you try, the more you're going to be laughed at, now, and by history. Anyone who has ever tried to control humour, now has a category of jokes devoted to them. — Vir Das (@thevirdas) January 3, 2021 I'm just going to leave this here. pic.twitter.com/C8eqqDzPya — Vir Das (@thevirdas) January 3, 2021