alex Certify ಮುರಿದು ಬಿತ್ತಾ ವೈಷ್ಣವಿ ಗೌಡ ಮದುವೆ ಮಾತುಕತೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುರಿದು ಬಿತ್ತಾ ವೈಷ್ಣವಿ ಗೌಡ ಮದುವೆ ಮಾತುಕತೆ…?

ನಟಿ ವೈಷ್ಣವಿ ಗೌಡ ಹಾಗೂ ಉದ್ಯಮಿ ವಿದ್ಯಾಭರಣ್ ನಡುವಿನ ಮದುವೆ ಮಾತುಕತೆ ಮುರಿದು ಬಿದ್ದಿದೆ. ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಾದ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಅವರು ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಎರಡು ಕುಟುಂಬದವರು ನವೆಂಬರ್ 11ರಂದು ಮದುವೆ ಮಾತುಕತೆ ನಡೆಸಿದ್ದಾರೆ. ಅಂದು ತೆಗೆದ ಫೋಟೋ ವೈರಲ್ ಆಗಿದೆ ಎಂದು ಹೇಳಲಾಗಿದೆ.

ನಿಶ್ಚಿತಾರ್ಥವಾಗಿದೆ ಎನ್ನಲಾದ ಫೋಟೋ ಹರಿದಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ವೈಷ್ಣವಿ ಗೌಡ, ನಮ್ಮ ಖಾಸಗಿ ತನಕ್ಕೆ ಗೌರವ ಕೊಡಿ. ಇದು ಎಂಗೇಜ್ಮೆಂಟ್ ಅಲ್ಲ. ನಿಶ್ಚಿತಾರ್ಥ ಮಾಡಿಕೊಂಡರೆ ನಾನೇ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನು ಇಲ್ಲಿಗೆ ಬಿಟ್ಟುಬಿಡಿ, ಮತ್ತಷ್ಟು ಎಳೆಯಬೇಡಿ. ಶುಭ ಕೋರಿದ ಎಲ್ಲರಿಗೂ ಧನ್ಯವಾದ ಎಂದು ಅವರು ಹೇಳಿದ್ದು, ಮದುವೆ ಮಾತುಕತೆ ಕ್ಯಾನ್ಸಲ್ ಆಗಿರುವ ವಿಚಾರ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ವಿದ್ಯಾಭರಣ್ ವಿರುದ್ಧ ಯುವತಿಯೊಬ್ಬಳು ಆರೋಪ ಮಾಡಿದ್ದು, ಆರೋಪವನ್ನು ವಿದ್ಯಾಭರಣ್ ಅಲ್ಲಗಳದಿದ್ದಾರೆ. ಈ ಹಿಂದೆ ನನಗೆ ಗರ್ಲ್ ಫ್ರೆಂಡ್ ಇದ್ದಿದ್ದು ನಿಜ. ಯಾವುದೇ ಹುಡುಗಿಯೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ನನ್ನ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಯುವತಿ ನೇರವಾಗಿ ಆರೋಪ ಮಾಡಬಹುದಿತ್ತು. ಇಲ್ಲದಿದ್ದರೆ ದೂರು ಕೊಡಬಹುದಿತ್ತು. ನಮ್ಮ ಕುಟುಂಬದ ವರ್ಚಸ್ಸು ಹಾಳು ಮಾಡುವ ಪ್ರಯತ್ನ ನಡೆದಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...