ಕೊಡಕ್ ಬ್ಲ್ಯಾಕ್ ಎಂಬ ಹೆಸರಿನಿಂದಲೇ ಖ್ಯಾತಿ ಗಳಿಸಿರುವ ಅಮೆರಿಕದ ರ್ಯಾಪರ್ ಬಿಲ್ ಕಹನ್ ಕಪ್ರಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. 24 ವರ್ಷದ ಈ ಕಲಾವಿದ 100 ಡಾಲರ್ ಮೌಲ್ಯದ ಹಣವನ್ನ ವಿವಿಧ ರೀತಿಯಲ್ಲಿ ಹಾಳು ಮಾಡಿದ್ದಾರೆ. ಶೌಚಾಲಯದ ಒಳಕ್ಕೆ ಹಣವನ್ನ ಹಾಕಿ ನಾಶ ಮಾಡಿದ್ದಾರೆ.
ಕೋವಿಡ್ 2ನೇ ಅಲೆ ವೇಳೆ ಅತಿ ಹೆಚ್ಚು ಬಳಕೆಯಾಗಿದೆ ಈ ಪದ..!
ಸದ್ಯ ಈ ವಿಡಿಯೋ ಕೊಡಕ್ರ ಇನ್ಸ್ಟಾ ಖಾತೆಯಲ್ಲಿ ಡಿಲೀಟ್ ಆಗಿದ್ದರೂ ಸಹ ವಿಡಿಯೋ ಬೇರೆ ಬೇರೆ ಖಾತೆಗಳಲ್ಲಿ ಶೇರ್ ಆಗುತ್ತಿದೆ.
ರ್ಯಾಪರ್ನ ಈ ವರ್ತನೆಯಿಂದ ಯಾವೊಬ್ಬ ನೆಟ್ಟಿಗರು ಖುಷಿಯಾದಂತೆ ಕಾಣಲಿಲ್ಲ. ಈ ರೀತಿ ಹಣವನ್ನ ಶೌಚಾಲಯಕ್ಕೆ ಹಾಕುವ ಬದಲು ಅನಾಥರಿಗೆ, ನಿರಾಶ್ರಿತರಿಗೆ ಮಕ್ಕಳ ಚ್ಯಾರಿಟಿಗಳಿಗೆ ನೀಡಬಹುದಿತ್ತು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಈ ಕಾರಣಕ್ಕೆ ಸದ್ದು ಮಾಡ್ತಿದೆ ಮಾಜಿ ಆಟಗಾರನ ಸೆಲ್ಫಿ
ಇನ್ನು ಈ ವಿಡಿಯೋಗೆ ಕಮೆಂಟ್ ಮಾಡಿರುವ ಮ್ಯಾಕ್ ಲೆಥಲ್, ಬಡವರು ಇರುವ ಸೂಪರ್ ಮಾರ್ಕೆಟ್ನ ಎದುರು 100 ಸಾವಿರ ಡಾಲರ್ ಹಣವನ್ನ ಎಸೆಯೋದು ಇದಕ್ಕಿಂತ ಒಳ್ಳೆಯ ಕೆಲಸವಾಗಿದೆ ಎಂದು ಸಲಹೆ ನೀಡಿದ್ದಾರೆ.