alex Certify ನಟ ರಿತೇಶ್​ ದೇಶಮುಖ್ ಮನ ಗೆದ್ದಿದೆ ಈ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ರಿತೇಶ್​ ದೇಶಮುಖ್ ಮನ ಗೆದ್ದಿದೆ ಈ ವಿಡಿಯೋ..!

ನೀವು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ವ್ಯಕ್ತಿ ಆಗಿದ್ದರೆ ನಿಮಗೆ ಅಮೆರಿಕದ ವ್ಯಕ್ತಿ ಬಾಲಿವುಡ್​ ಹಾಡಿಗೆ ನೃತ್ಯ ಮಾಡೋ ವಿಡಿಯೋಗಳನ್ನ ನೋಡಿರ್ತೀರಾ. ರಿಕಿ ಎಲ್​ ಪಾಂಡ್​​ ಹೃತಿಕ್​​ ರೋಶನ್ ​​ರ 2019ರ ಹಿಟ್​ ಸಾಂಗ್​ ಗುಂಗ್ರೂ ಹಾಡಿಗೆ ಹೆಜ್ಜೆ ಹಾಕೋ ಮೂಲಕ ಈ ವ್ಯಕ್ತಿ ಡಿಸೆಂಬರ್​ ತಿಂಗಳಿನಿಂದ ಸೋಶಿಯಲ್​ ಮೀಡಿಯಾದಲ್ಲಿ ಹೊಸ ಟ್ರೆಂಡ್​ ಸೆಟ್​ ಮಾಡ್ತಿದ್ದಾರೆ.

ಬಾಲಿವುಡ್​ ಸಿನಿಮಾದ ಹಾಡುಗಳಿಗೆ ನೃತ್ಯ ಮಾಡಿದ ಸಾಕಷ್ಟು ವಿಡಿಯೋಗಳನ್ನ ಈಗಾಗಲೇ ರಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಇದರಲ್ಲಿ ಒಂದು ವಿಡಿಯೋ ಬಾಲಿವುಡ್​ ನಟ ರಿತೇಶ್​ ದೇಶಮುಖ್​ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ರಿತೇಶ್​ ದೇಶಮುಖ್​ ಅಭಿನಯದ 2006ರಲ್ಲಿ ತೆರೆ ಕಂಡ ಅಪ್ನಾ ಸಪ್ನಾ ಮನಿ ಮನಿ ಸಿನಿಮಾದ ‘ದಿಲ್​ ಮೇ ಬಜಿ ಗಿಟಾರ್ʼ​ ಎಂಬ ಹಾಡಿಗೆ ನೃತ್ಯ ಮಾಡಿರುವ ರಿಕಿ ವಿಡಿಯೋವನ್ನ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದರು. ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್​ ಆಗಿದೆ ಅಂದ್ರೆ ಸ್ವತಃ ರಿತೇಶ್​ ದೇಶಮುಖ್​ ಈ ವಿಡಿಯೋ ಸಂಬಂಧ ಟ್ವೀಟ್​ ಮಾಡಿದ್ದಾರೆ. ನನಗೆ ನಿಮಗೆ ನೃತ್ಯದ ವಿಡಿಯೋಗಳು ಅಂದರೆ ಇಷ್ಟ. ಈ ವಿಡಿಯೋ ಕೂಡ ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ .

— Riteish Deshmukh (@Riteishd) January 11, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...