ಬ್ರಿಟಿಷ್ ರಿಯಾಲಿಟಿ ಶೋ ಒಂದರಲ್ಲಿ ಆ ಪ್ರದೇಶಕ್ಕೆ ಸಂಬಂಧ ಪಡದ ಜಂತುಗಳನ್ನ ಅರಣ್ಯ ಪ್ರದೇಶದಲ್ಲಿ ಬಿಟ್ಟ ಆರೋಪದಡಿಯಲ್ಲಿ ಯುಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಆ ಪ್ರದೇಶಕ್ಕೆ ಸಂಬಂಧಪಡದ ಜಾತಿಗೆ ಸೇರಿದ ಜಿರಳೆ, ಜೇಡರ ಹುಳು ಸೇರಿದಂತೆ ವಿವಿಧ ಹುಳು ಹುಪ್ಪಟೆಗಳನ್ನ ಬಿಡಲಾಗಿದೆ ಅಂತಾ ಆರೋಪಿಸಲಾಗಿದೆ. ಈ ಬಗ್ಗೆ ದೂರನ್ನ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಾವು ಶೋ ಮುಗಿದ ಬಳಿಕ ಆ ಎಲ್ಲ ಜೀವಿಗಳನ್ನ ರಕ್ಷಿಸಿದ್ದೇವೆ ಅಂತಾ ʼಆಯಾಮ್ ಸೆಲೆಬ್ರಿಟಿʼ ರಿಯಾಲಿಟಿ ಶೋ ಮುಖ್ಯಸ್ಥರು ಹೇಳಿದ್ದಾರೆ. ಆದರೆ ಈ ರೀತಿ ಆ ಪ್ರದೇಶಕ್ಕೆ ಸೇರದ ಜಾತಿಯ ಹುಳು – ಹುಪ್ಪಟೆಗಳನ್ನ ಬಿಡಲು ಶೋ ಮುಖ್ಯಸ್ಥರು ಯಾವುದೇ ಪರವಾನಿಗಿ ಪಡೆದಿಲ್ಲ ಎಂದು ಆರೋಪಿಸಲಾಗಿದೆ.