alex Certify ವಲಸೆ ಕಾರ್ಮಿಕನ ತಾಯಿ ಮಾತು ಕೇಳಿ ಭಾವುಕರಾದ ಸೋನು ಸೂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಲಸೆ ಕಾರ್ಮಿಕನ ತಾಯಿ ಮಾತು ಕೇಳಿ ಭಾವುಕರಾದ ಸೋನು ಸೂದ್

ಮುಂಬೈ: ವಲಸೆ ಕಾರ್ಮಿಕರಿಗೆ ಬಸ್ ಮಾಡಿಸಿಕೊಟ್ಟು ಅವರ ಮನೆಗೆ ತಲುಪಿಸಿದ ಬಾಲಿವುಡ್ ನಟ ಸೋನು ಸೂದ್ ಅವರ ಕಾರ್ಯವನ್ನು ಶ್ಲಾಘಿಸಿದ ಕಾರ್ಮಿಕನ ತಾಯಿಯೊಬ್ಬಳ ವಿಡಿಯೋ ವೈರಲ್ ಆಗಿದೆ.‌

ಮನೀಶ್ ಎಂಬುವವರು ತಮ್ಮ ತಾಯಿ‌ ಮಾತನಾಡಿದ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ. “ನನ್ನ ಮಗ ಇಂದು ನನ್ನ ಜತೆಗಿದ್ದಾನೆ. ಅದಕ್ಕೆ ನಿಮಗೆ( ಸೋನು ಸೂದ್) ಅಭಿನಂದನೆ ಹೇಳಲು ಶಬ್ದಗಳೇ ಇಲ್ಲ. ” ಎಂದು ವೃದ್ಧೆ ಹೇಳಿದ್ದಾರೆ.

ಸೋನು ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದು, “ನಿಮ್ಮ ತಾಯಿಗೆ ನನ್ನ ನಮಸ್ಕಾರಗಳು.‌ ನನಗೆ ನಿಮ್ಮನ್ನು ನಿಮ್ಮ ತಾಯಿಯ ಜತೆ ಸೇರಿಸಿದ ಖುಷಿ ಇದೆ. ನಿಮ್ಮಂಥ ಇನ್ನೂ ಹಲವು ಕಾರ್ಮಿಕರನ್ನು ಅವರ ತಾಯಂದಿರ ಬಳಿ ಕಳಿಸಲು ಪ್ರಯತ್ನ ಮಾಡುತ್ತೇನೆ” ಎಂದಿದ್ದಾರೆ.

ನೆಟ್ಟಿಗರು ಸೋನು ಅವರ ಕಾರ್ಯಕ್ಕೆ ಅಭಿನಂದಿಸಿದ್ದಾರೆ.‌
ಸೋನು ವಲಸೆ ಕಾರ್ಮಿಕರಿಗೆ ಅವರ ಊರಿಗೆ ತೆರಳಲು ಬಸ್ ವ್ಯವಸ್ಥೆಯಷ್ಟನ್ನೇ ಅಲ್ಲ ಕೇರಳದ 177 ಯುವತಿಯರನ್ನು ವಿಮಾನದ ಮೂಲಕ ಒಡಿಶಾಕ್ಕೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...