alex Certify ಖ್ಯಾತ ನಟನ ಮುಂದೆ ವಿಚಿತ್ರ ಬೇಡಿಕೆ ಇಟ್ಟ ಯುವಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಟನ ಮುಂದೆ ವಿಚಿತ್ರ ಬೇಡಿಕೆ ಇಟ್ಟ ಯುವಕ..!

ಮುಂಬೈ: ನಟ ಸೋನುಸೂದ್ ಕಳೆದ 2 ವಾರಗಳಿಂದ ಸಾಕಷ್ಟು ಪ್ರಸಿದ್ದಿಯಲ್ಲಿ ಇದ್ದಾರೆ. ಬಿಹಾರದ 350 ವಲಸೆ ಕಾರ್ಮಿಕರು ಮನೆ ಸೇರಲು ಸಹಾಯ ಮಾಡಿದ್ದಾರೆ.

ಲಾಕ್‌ಡೌನ್ ನಿಂದಾಗಿ ತೊಂದರೆಯಲ್ಲಿ ಸಿಲುಕಿದ್ದ ಹಲವರಿಗೆ ಊಟ ಮತ್ತು ಅವಶ್ಯಕ ವಸ್ತುಗಳನ್ನು ನೀಡುವುದರ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಅದಷ್ಟೇ ಅಲ್ಲದೇ ಟ್ವೀಟರ್ ನಲ್ಲಿ ಹಲವರಿಗೆ ವಿಭಿನ್ನ‌ ರೀತಿಯ ಪ್ರತ್ಯುತ್ತರ ನೀಡಿ ಗಮನ ಸೆಳೆದಿದ್ದಾರೆ.

ಮೊನ್ನೆಯಷ್ಟೆ ಒಬ್ಬ ತನಗೆ ಸಾರಾಯಿ ಅಂಗಡಿಗೆ ಹೋಗಲು ಸಹಾಯ ಮಾಡಲು ಟ್ವಿಟರ್ ನಲ್ಲಿ ಸೋನು ಸೂದ್ ಬಳಿ ಕೇಳಿಕೊಂಡಿದ್ದ. ಕೋಪಗೊಳ್ಳದೆ, ಸೋನು “ನಾನು ನಿನ್ನನ್ನು ಸಾರಾಯಿ ಅಂಗಡಿಗೆ ಹೋಗಲು ಸಹಾಯ ಮಾಡಲಾರೆ, ಆದರೆ ಸಾರಾಯಿ ಅಂಗಡಿಯಿಂದ ಮನೆಗೆ ತಲುಪಲು ಬೇಕಾದರೆ ಸಹಾಯ ಮಾಡುವೆ” ಎಂದು ಪ್ರತಿಕ್ರಿಯಿಸಿ ಸಾಕಷ್ಟು ಸುದ್ದಿ ಮಾಡಿದ್ದರು.

ಈಗ ಇದೇ ರೀತಿ ಮತ್ತೊಬ್ಬ ಬಿಹಾರದ ಯುವಕ ನಟ ಸೋನು ಬಳಿ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ. ಅದೇನೆಂದರೆ ತನ್ನ ಗೆಳತಿಯನ್ನು ನೋಡಲು ಬಿಹಾರಕ್ಕೆ ಹೋಗಲು ಸಹಾಯ ಮಾಡಿ ಎಂದು ಟ್ವೀಟರ್ ನಲ್ಲಿ ಕೇಳಿಕೊಂಡಿದ್ದಾನೆ. ಅದಕ್ಕೆ ಸೋನು “ಸ್ವಲ್ಪ ದಿನ ದೂರವಿದ್ದು ನೋಡು, ನಿಜವಾದ ಪ್ರೀತಿಯ ಪರೀಕ್ಷೆ ಆಗಲಿ” ಎಂದು ಪ್ರತಿಕ್ರಿಯಿಸಿದ್ದು, ನೆಟ್ಟಿಗರಿಂದ ಭರ್ಜರಿ ಪ್ರತಿಕ್ರಿಯೆ ಬಂದಿದೆ.

ಈ ಟ್ವೀಟ್ 40 ಸಾವಿರ ಲೈಕ್ ಮತ್ತು 4000 ರಿಟ್ವೀಟ್ ಗಳನ್ನು ಪಡೆದಿದೆ. ಒಟ್ಟಿನಲ್ಲಿ ಸೋನು ತಮ್ಮ ಅಭಿಮಾನಿಗಳ ಮನಸನ್ನು ಹಾಸ್ಯ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿಯಿಂದ ಗೆದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...