alex Certify ನಟಿಗೆ ಅಶ್ಲೀಲ ಸಂದೇಶ, ಅತ್ಯಾಚಾರದ ಬೆದರಿಕೆ: ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿಗೆ ಅಶ್ಲೀಲ ಸಂದೇಶ, ಅತ್ಯಾಚಾರದ ಬೆದರಿಕೆ: ದೂರು

ಕೊಲ್ಕತ್ತಾ: ಬಂಗಾಳದ ಕಿರುತೆರೆ ನಟಿ ಪ್ರತ್ಯುಷಾ ಪಾಲ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರದ ಬೆದರಿಕೆ ಹಾಕಿದ್ದು, ಅಶ್ಲೀಲ ಸಂದೇಶ ಕಳುಹಿಸಲಾಗಿದೆ. ಪ್ರತ್ಯುಷಾ ಪಾಲ್ ಕೊಲ್ಕತ್ತಾ ಸೈಬರ್ ಸೆಲ್ ಗೆ ದೂರು ನೀಡಿದ್ದಾರೆ.

ಆರಂಭದಲ್ಲಿ ಇಂತಹ ಸಂದೇಶಗಳನ್ನು ನಿರ್ಲಕ್ಷಿಸಿದ ನಟಿ ಹೊಸ ಹೊಸ ಖಾತೆಗಳಿಂದ ಬೆದರಿಕೆ ಸಂದೇಶಗಳು ಬಂದ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಮೂವತ್ತು ಬಾರಿ ಬಳಕೆದಾರರನ್ನು ನಿರ್ಬಂಧಿಸಿದ್ದಾರೆ. ಕೆಲವು ದಿನಗಳಿಂದ ಇಂತಹ ಬೆಳವಣಿಗೆ ನಡೆದಿದ್ದು, ಶನಿವಾರ ಮತ್ತು ಭಾನುವಾರ ಕೂಡ ಅತ್ಯಾಚಾರದ ಬೆದರಿಕೆ, ಅಶ್ಲೀಲ ಸಂದೇಶ ಕಳುಹಿಸಲಾಗಿದೆ. ನಂತರ ಪ್ರತ್ಯುಷಾ ದೂರು ನೀಡಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಆದರೆ, ದೂರಿಗೆ ಸಂಬಂಧಿಸಿದಂತೆ ಬೆದರಿಕೆ ಪೋಸ್ಟ್ ಕಳುಹಿಸಿದವರ ವಿವರಗಳನ್ನು ಕೋರಿ ಇನ್‌ಸ್ಟಾಗ್ರಾಮ್‌ಗೆ ಇಮೇಲ್ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...