alex Certify ಕೋವಿಡ್​ನಿಂದ ನಟಿ ದಿವ್ಯಾ ಭಟ್ನಾಗರ್​ ನಿಧನ: ಇಲ್ಲಿದೆ ನೋಡಿ ನಟಿಯ ಬಗೆಗಿನ ರೋಚಕ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ನಿಂದ ನಟಿ ದಿವ್ಯಾ ಭಟ್ನಾಗರ್​ ನಿಧನ: ಇಲ್ಲಿದೆ ನೋಡಿ ನಟಿಯ ಬಗೆಗಿನ ರೋಚಕ ಮಾಹಿತಿ

ಕೋವಿಡ್​​ನಿಂದ ನಿಧನರಾದ ಹಿಂದಿ ಕಿರುತರೆ ನಟಿ ದಿವ್ಯಾ ಭಟ್ನಾಗರ್​​​ ಅಗಲಿಕೆಗೆ ತಾರೆಯರು ಕಂಬನಿ ಮಿಡಿದಿದ್ದಾರೆ. ಮುಂಬೈನ ಸೆವೆನ್​ ಹಿಲ್ಸ್ ಆಸ್ಪತ್ರೆಗೆ ದಾಖಲಾಗಿದ್ದ 34 ವರ್ಷದ ದಿವ್ಯಾರನ್ನ ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ದಿವ್ಯಾ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ನವೆಂಬರ್​ 26 ರಂದು ದಿವ್ಯಾರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದ ದಿವ್ಯಾರನ್ನ ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು.

ದಿವ್ಯಾ ಭಟ್ನಾಗರ್​ ನಿಧನಕ್ಕೆ ಸಂತಾಪ ಸೂಚಿಸಿ ನಟಿ ದೆಬೊಲಿನಾ ಭಟ್ಟಾಜಾರ್ಜಿ ಇನ್ಸ್​​ಟಾಗ್ರಾಂನಲ್ಲಿ ಪೋಸ್ಟ್ ಶೇರ್​ ಮಾಡಿದ್ದಾರೆ. ಭಾವನಾತ್ಮಕ ಕ್ಯಾಪ್ಶನ್​ ನೀಡಿ ಅಗಲಿದ ನಟಿಗೆ ಅಂತಿಮ ನಮನ ಕೋರಿದ್ರು. ಶಿಲ್ಪಾ ಶಿರೋಡ್ಕರ್​ ಕೂಡ ದಿವ್ಯಾ ಜೊತೆಗಿನ ಫೋಟೋ ಶೇರ್​ ಮಾಡಿ ಆರ್​​ಐಪಿ ಎಂದು ಬರೆದುಕೊಂಡಿದ್ದಾರೆ. ದಿವ್ಯಾ ವಿವಾಹ ಸಂಬಂಧವನ್ನ ಮುರಿದುಕೊಂಡಿದ್ದರು. ಇದಾದ ಬಳಿಕ ಅವರು ಸಾಕಷ್ಟು ಒತ್ತಡದಲ್ಲಿದ್ದರು. ಕಳೆದ ವರ್ಷ ಡಿಸೆಂಬರ್​​​ನಲ್ಲಿ ಗಗನ್​ ಎಂಬವರ ಜೊತೆ ದಿವ್ಯಾ ವಿವಾಹವಾಗಿತ್ತು. ಆದರೆ ಗಗನ್​​ ದಿವ್ಯಾರನ್ನ ತೊರೆದಿದ್ದರಿಂದ ಒಬ್ಬಂಟಿಯಾಗಿದ್ದರು.
ದಿವ್ಯಾ ಭಟ್ನಾಗರ್​ ‘ತೇರಾ ಯಾರ್​ ಹೂ’ ಎಂಬ ಹಾಸ್ಯ ಕಾರ್ಯಕ್ರಮದ ಶೂಟಿಂಗ್​​ನಲ್ಲಿದ್ದಾಗ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’, ‘ಸಂಸ್ಕಾರ್’, ‘ಉಢಾನ್​’, ‘ಜೀತ್​ ಗಯಿ ತೋ ಪಿಯಾ ಮೋರೆ’ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...