alex Certify ಬಿಡುಗಡೆಯಾದ ಮೊದಲ ದಿನವೇ ʼತೂಫಾನ್ʼ​ಗೆ ಪೈರಸಿ ಕಾಟ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾದ ಮೊದಲ ದಿನವೇ ʼತೂಫಾನ್ʼ​ಗೆ ಪೈರಸಿ ಕಾಟ…..!

ಹೆಸರಾಂತ​ ಒಟಿಟಿ ಫ್ಲಾಟ್​ಫಾರಂನಲ್ಲಿ ಒಂದಾದ ಅಮೆಜಾನ್ ಪ್ರೈಮ್​​ನಲ್ಲಿ ಭಾರತದ ಸೇರಿದಂತೆ 240 ದೇಶಗಳಲ್ಲಿ ಇಂದು ಫರ್ಹಾನ್​ ಅಖ್ತರ್​, ಪರೇಶ್​ ರಾವಲ್, ಸುಪ್ರಿಯಾ ಪಾಠಕ್​ ನಟನೆಯ ತೂಫಾನ್​ ಸಿನಿಮಾ ರಿಲೀಸ್​ ಆಗಿದೆ.

ಭಾಗ್​ ಮಿಲ್ಖಾ ಭಾಗ್​ ಯಶಸ್ಸಿನ ಬಳಿಕ ಈ ಸಿನಿಮಾದ ಮೂಲಕ ಫರ್ಹಾನ್​ ಹಾಗೂ ರಾಕೇಶ್​ ಓಂಪ್ರಕಾಶ್​ ಮೆಹ್ರಾ ಮತ್ತೆ ಒಂದಾಗಿ ಈ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡಿದ್ದಾರೆ. ತೂಫಾನ್​ ಸಿನಿಮಾ ಮೂಲಕ ಚಿತ್ರತಂಡ ಪ್ರೇಕ್ಷಕರಿಗೆ ಒಂದೊಳ್ಳೆ ಕತೆಯನ್ನ ಹೆಣೆದುಕೊಟ್ಟಿರೋದರ ನಡುವೆಯೇ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ಮೊದಲ ದಿನವೇ ಹೆಚ್​ಡಿ ಗುಣಮುಟ್ಟದ ಸಿನಿಮಾ ಇತರೆ ವೆಬ್​ಸೈಟ್​ಗಳಲ್ಲಿ ಸೋರಿಕೆಯಾಗಿದೆ.

ಈ ರೀತಿ ಸಿನಿಮಾ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ಮೊದಲೇ ದಿನವೇ ಪೈರಸಿ ಕಾಟ ಅನುಭವಿಸಿರೋದ್ರಿಂದ ಟಿಆರ್​ಪಿ ರೇಟಿಂಗ್​​ಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಫರ್ಹಾನ್​ ಅಖ್ತರ್​ರ ತೂಫಾನ್​ ಸಿನಿಮಾದ ಹೆಚ್​ಡಿ ವಿಡಿಯೋ ತಮಿಳ್​ರಾಕರ್ಸ್​, ಟೆಲಿಗ್ರಾಂ, ಮೂವಿರುಲ್ಜ್ ಸೇರಿದಂತೆ ವಿವಿಧೆಡೆ ಸೋರಿಕೆ ಮಾಡಲಾಗಿದೆ.

ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಅಧಿಕೃತವಾಗಿ ಲಭ್ಯವಿರುವ ತೂಫಾನ್​ ಸಿನಿಮಾದಲ್ಲಿ ಮೃಣಾಲ್​ ಠಾಕೂರ್​, ಹುಸೇನ್​ ದಲಾಲ್, ಮೋಹನ್​ ಅಗಶೆ, ವಿಜಯ್​ ರಾಝ್​, ದರ್ಶನ್​ ಕುಮಾರ್​ ಕೂಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ಫರ್ಹಾನ್​ ರಾಷ್ಟ್ರಮಟ್ಟದ ಬಾಕ್ಸಿಂಗ್​ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದಾರೆ. ಪರೇಶ್​ ರಾವಲ್​ ಬಾಕ್ಸಿಂಗ್​ ಕೋಚ್​ ಆಗಿ ನಟಿಸಿದ್ದು ಅಕ್ತರ್​ಗೆ ಕೇವಲ ಬಾಕ್ಸಿಂಗ್​ ಮಾತ್ರವಲ್ಲದೇ ಜೀವನದ ಪಾಠವನ್ನೂ ಕಲಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...