alex Certify ಅಬ್ಬಬ್ಬಾ…! ಈತನ ಡಾನ್ಸ್ ಗೆ ಬೆರಗಾಗಿದ್ದಾರೆ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…! ಈತನ ಡಾನ್ಸ್ ಗೆ ಬೆರಗಾಗಿದ್ದಾರೆ ಜನ

ನವದೆಹಲಿ: ಈ ಮೊದಲೆಲ್ಲ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಹೀಗಾಗಿ ಅವರೆಲ್ಲ ಎಲೆ ಮರೆಯ ಕಾಯಿಯಂತೆ ಅಲ್ಲೇ ಮರೆಯಾಗುತ್ತಿದ್ದರು ಎಂಬ ಮಾತಿತ್ತು. ಆದರೆ, ಈಗ ಕಾಲ ಬದಲಾಗಿದೆ, ನಮ್ಮನ್ನು ನಾವು ಪ್ರಮೋಟ್ ಮಾಡಿಕೊಳ್ಳಲು ಹಲವಾರು ವೇದಿಕೆಗಳಿವೆ.

ಸಾಮಾಜಿಕ ಜಾಲತಾಣಕ್ಕಿಂತ ದೊಡ್ಡ ವೇದಿಕೆ ಬೇಕೇ? ಇಲ್ಲೊಬ್ಬ ಟಿಕ್ ಟಾಕ್ ನಲ್ಲಿ ಡ್ಯಾನ್ಸ್ ಮಾಡಿ ರಾತ್ರೋರಾತ್ರಿ ಫೇಮಸ್ ಆಗಿದ್ದಾನೆ.

ಅರ್ಮಾನ್ ರಾಥೋಡ್ ಎಂಬ ಟಿಕ್ ಟಾಕ್ ಬಳಕೆದಾರನೇ ಈಗ ಸಾವಿರಾರು ಮಂದಿಯ ಹೃದಯ ಗೆದ್ದವನು. ದೊಗಲೆ ಶರ್ಟು ಹಾಗೂ ಪ್ಯಾಂಟನ್ನು ತೊಟ್ಟಿದ್ದ ಅರ್ಮಾನ್, ಕಭಿ ಖುಷಿ ಕಭೀ ಗಮ್ ಚಿತ್ರದ ಹೃತಿಕ್ ರೋಷನ್ ಅಭಿನಯದ “ಯು ಆರ್ ಮೈ ಸೋನಿಯಾ” ಹಾಡಿಗೆ ಹೆಜ್ಜೆ ಹಾಕಿದ್ದಾನೆ.

ಒಟ್ಟು 33 ಸೆಕೆಂಡ್ ಗಳಿರುವ ಈ ವಿಡಿಯೋವನ್ನು ಈಗಾಗಲೇ 30 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 47.6k ಮಂದಿ ಲೈಕ್ ಮಾಡಿದ್ದಾರೆ. ಆದರೆ, ಇದೀಗ ಟ್ವಿಟ್ಟರ್ ನಲ್ಲಿ ರೋಸಿ ಎಂಬುವರು ಅಪ್ಲೋಡ್ ಮಾಡಿದ್ದು, ಭರ್ಜರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...