alex Certify ಈ ಕಾರಣಕ್ಕೆ ಮಕ್ಕಳ ಜೊತೆ ಪೋರ್ನ್ ವೀಕ್ಷಣೆ ಮಾಡ್ತಾಳೆ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಮಕ್ಕಳ ಜೊತೆ ಪೋರ್ನ್ ವೀಕ್ಷಣೆ ಮಾಡ್ತಾಳೆ ಮಹಿಳೆ…!

ಇಂಡೋನೇಷ್ಯಾದ ಪ್ರಸಿದ್ಧ ಗಾಯಕಿ ತನ್ನ ಮಕ್ಕಳೊಂದಿಗೆ ಪೋರ್ನ್ ಚಿತ್ರಗಳನ್ನು ವೀಕ್ಷಿಸುತ್ತೇನೆ ಎನ್ನುವ ಮೂಲಕ ಸುದ್ದಿಗೆ ಬಂದಿದ್ದಾಳೆ. ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದೇನೆ ಎಂದು ಹೇಳಿದ್ದಾಳೆ.

49 ವರ್ಷದ ಯುನಿ ಶರಾ ಇಂಡೋನೇಷ್ಯಾದ ಪ್ರಸಿದ್ಧ ಗಾಯಕಿ. ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡುವ ಅವರ ವಿಧಾನ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ.

ದೇಶದ ಪ್ರಸಿದ್ಧ ಯೂಟ್ಯೂಬರ್ ವೆನ್ನಾ ಮೆಲಿಂಡಾ ಜೊತೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಯುನಿ ಶರಾ, ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ವಿಚಾರದಲ್ಲಿ ಹಳೆ ಪದ್ಧತಿಗಳನ್ನು ಇಷ್ಟಪಡುವುದಿಲ್ಲ. ಮಕ್ಕಳಿಗೆ ನಿಜವಾದ ಲೈಂಗಿಕ ಶಿಕ್ಷಣವನ್ನು ನೀಡಲು ಬಯಸಿದ್ದೇನೆ. ಇದೇ ಕಾರಣಕ್ಕೆ ಇಬ್ಬರು ಗಂಡು ಮಕ್ಕಳ ಜೊತೆ ಕುಳಿತು ಪೋರ್ನ್ ವೀಕ್ಷಣೆ ಮಾಡ್ತೇನೆಂದು ಆಕೆ ಹೇಳಿದ್ದಾಳೆ.

ಆಕೆಗೆ ಇಬ್ಬರು ಗಂಡು ಮಕ್ಕಳು. ಕೆವಿನ್ ಮತ್ತು ಸೈಲೋ ಸಿಯಾಹಾನ್. ಸಂಪ್ರದಾಯವಾದಿಯಾಗುವ ಬದಲು ನನ್ನ ಮಕ್ಕಳು ಮುಕ್ತ ಮನಸ್ಸಿನವರಾಗಿರಬೇಕು ಎಂದು ಶರಾ ಹೇಳಿದ್ದಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...