alex Certify ಇಂಟರ್ನೆಟ್‌ ನಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ: ನೀವೂ ನೋಡಿ ಎಂಜಾಯ್‌ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್‌ ನಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ: ನೀವೂ ನೋಡಿ ಎಂಜಾಯ್‌ ಮಾಡಿ

ಕೊರೊನಾದಿಂದಾಗಿ ಒಂದಿಲ್ಲೊಂದು ಕಠಿಣ ಸುದ್ದಿಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ನೋಡುತ್ತಿರೋದ್ರ ನಡುವೆಯೇ ವಿಶೇಷ ನೃತ್ಯದ ವಿಡಿಯೋವೊಂದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಪಾರ್ಕ್​ ಒಂದರಲ್ಲಿ ಜನರ ಮಧ್ಯೆ ಇದ್ದಕ್ಕಿದ್ದಂತೆ ಬಂದು ನೃತ್ಯ ಪ್ರದರ್ಶಿಸುವ ಮೂಲಕ ಈ ತಂಡ ಜನರನ್ನ ರಂಜಿಸಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಏಕಾಏಕಿ ಬಂದು ನೃತ್ಯ ಪ್ರದರ್ಶನ ನೀಡೋದನ್ನ ದಿ ಫ್ಲಾಶ್​ ಮಾಬ್​ ಎಂದು ಕರೆಯಲಾಗುತ್ತೆ. ಸಾಂತಾ ಮೊನಿಕಾ ಪಾರ್ಕ್​ನಲ್ಲಿ ಬೋಬ್ಸ್​ ಡಾನ್ಸ್ ಶಾಪ್​ ಈ ದಿ ಫ್ಲಾಶ್​ ಮಾಬ್​ನ್ನು ಆಯೋಜಿಸಿತ್ತು. ಅಂದಹಾಗೆ ಈ ಫ್ಲಾಶ್​ ಮೋಬ್​ನಲ್ಲಿ ನೃತ್ಯ ಮಾಡೋದಕ್ಕೂ ಮುನ್ನ ಇವರೆಲ್ಲ ಕೇವಲ 2 ಗಂಟೆಗಳ ಕಾಲ ಮಾತ್ರ ತರಬೇತಿಯನ್ನ ಪಡೆದಿದ್ದರಂತೆ.

ಕೊರೊನಾ ಲಸಿಕೆ ಪಡೆದವರಿಗೆ ಕ್ಷೌರದಂಗಡಿಯಲ್ಲಿ ಸಿಗುತ್ತೆ ವಿಶೇಷ ಸೇವೆ..!

ಈ ವಿಡಿಯೋ ಟ್ವಿಟರ್​ನಲ್ಲಿ ಎಷ್ಟರ ಮಟ್ಟಿಗೆ ವೈರಲ್​ ಆಗಿದೆ ಅಂದರೆ ಅಮೆರಿಕದ ಬಾಸ್ಕೆಟ್​ ಬಾಲ್​ ಆಟಗಾರ ರೆಕ್ಸ್​ ಚಾಪ್​ಮನ್​ ಇದನ್ನ ಟೈಮ್​ಲೈನ್​ ಕ್ಲೆನ್ಸರ್​ ಎಂದು ಹೊಗಳಿದ್ದಾರೆ. ಈ ವಿಡಿಯೋ 7.7 ಲಕ್ಷ ವೀವ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.

https://www.instagram.com/reel/CQZUY6LJAaO/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...