alex Certify ಅಕ್ಷಯ್ ಕುಮಾರ್‌ಗೆ ಕಪಿಲ್ ಶರ್ಮಾ ಕೊಟ್ಟ ಉಡುಗೊರೆ ಏನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಷಯ್ ಕುಮಾರ್‌ಗೆ ಕಪಿಲ್ ಶರ್ಮಾ ಕೊಟ್ಟ ಉಡುಗೊರೆ ಏನು ಗೊತ್ತಾ…?

ಅನೇಕ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡುತ್ತಿರುವ ಅಕ್ಷಯ್ ಕುಮಾರ್ ಇದೀಗ ಲಕ್ಷ್ಮಿ ಬಾಂಬ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸತತ 25 ವರ್ಷಗಳಿಂದ ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವ ಈ ನಟನಿಗೆ ಕಪಿಲ್ ಶರ್ಮಾ ಮರೆಯಲಾಗದ ಉಡುಗೊರೆಯೊಂದನ್ನು ನೀಡಿದ್ದಾರೆ.

ಹೌದು, ಇತ್ತೀಚೆಗೆ ಅಕ್ಷಯ್ ಕುಮಾರ್ 25 ವರ್ಷ ಸಿನಿ ಜರ್ನಿ ಪೂರೈಸಿದ್ದು, ದಿ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಸೆಲಿಬ್ರೇಷನ್ ಮಾಡಲಾಗಿದೆ. ಈ ವೇಳೆ ಅನೇಕರು ಹಲವಾರು ಉಡುಗೊರೆಯನ್ನು ಅಕ್ಷಯ್ ಕುಮಾರ್‌ಗೆ ನೀಡಿದ್ದಾರೆ. ಇದೇ ವೇಳೆ ಹಣ ಲೆಕ್ಕ ಮಾಡುವ ಮಿಶಿನ್‌ನ ಕಪಿಲ್ ಶರ್ಮಾ ಉಡುಗೊರೆಯಾಗಿ ನೀಡಿದ್ದಾರೆ.

ಈ ವೇಳೆ ಹಣ ಲೆಕ್ಕದ ಯಂತ್ರ ಕಂಡ ಅಕ್ಷಯ್ ಕುಮಾರ್ ಆಶ್ಚರ್ಯದ ಜೊತೆಗೆ ಕಪಿಲ್ ಶರ್ಮಾ ಅವರ ಕಾಲೆಳೆದಿದ್ದಾರೆ. ಈ ಮಿಶಿನ್‌ನನ್ನು ಕಪಿಲ್ ಶರ್ಮಾ ಅವರು ತಮ್ಮ ಮನೆಯಿಂದ ತಂದಿರಬಹುದು ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದ್ದಾರೆ. ಈ ಮಾತು ಯಾಕೆ ಹೇಳುತ್ತಿರುವೆ ಅಂದರೆ ಚಿತ್ರರಂಗದಲ್ಲಿರುವ ಅರ್ಧದಷ್ಟು ಹಣವನ್ನು ಕಪಿಲ್ ಶರ್ಮಾನೆ ಪಡೆದುಕೊಳ್ಳುತ್ತಾರೆ ಎಂದು ತಮಾಷೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...