ಅನೇಕ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡುತ್ತಿರುವ ಅಕ್ಷಯ್ ಕುಮಾರ್ ಇದೀಗ ಲಕ್ಷ್ಮಿ ಬಾಂಬ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸತತ 25 ವರ್ಷಗಳಿಂದ ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವ ಈ ನಟನಿಗೆ ಕಪಿಲ್ ಶರ್ಮಾ ಮರೆಯಲಾಗದ ಉಡುಗೊರೆಯೊಂದನ್ನು ನೀಡಿದ್ದಾರೆ.
ಹೌದು, ಇತ್ತೀಚೆಗೆ ಅಕ್ಷಯ್ ಕುಮಾರ್ 25 ವರ್ಷ ಸಿನಿ ಜರ್ನಿ ಪೂರೈಸಿದ್ದು, ದಿ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಸೆಲಿಬ್ರೇಷನ್ ಮಾಡಲಾಗಿದೆ. ಈ ವೇಳೆ ಅನೇಕರು ಹಲವಾರು ಉಡುಗೊರೆಯನ್ನು ಅಕ್ಷಯ್ ಕುಮಾರ್ಗೆ ನೀಡಿದ್ದಾರೆ. ಇದೇ ವೇಳೆ ಹಣ ಲೆಕ್ಕ ಮಾಡುವ ಮಿಶಿನ್ನ ಕಪಿಲ್ ಶರ್ಮಾ ಉಡುಗೊರೆಯಾಗಿ ನೀಡಿದ್ದಾರೆ.
ಈ ವೇಳೆ ಹಣ ಲೆಕ್ಕದ ಯಂತ್ರ ಕಂಡ ಅಕ್ಷಯ್ ಕುಮಾರ್ ಆಶ್ಚರ್ಯದ ಜೊತೆಗೆ ಕಪಿಲ್ ಶರ್ಮಾ ಅವರ ಕಾಲೆಳೆದಿದ್ದಾರೆ. ಈ ಮಿಶಿನ್ನನ್ನು ಕಪಿಲ್ ಶರ್ಮಾ ಅವರು ತಮ್ಮ ಮನೆಯಿಂದ ತಂದಿರಬಹುದು ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದ್ದಾರೆ. ಈ ಮಾತು ಯಾಕೆ ಹೇಳುತ್ತಿರುವೆ ಅಂದರೆ ಚಿತ್ರರಂಗದಲ್ಲಿರುವ ಅರ್ಧದಷ್ಟು ಹಣವನ್ನು ಕಪಿಲ್ ಶರ್ಮಾನೆ ಪಡೆದುಕೊಳ್ಳುತ್ತಾರೆ ಎಂದು ತಮಾಷೆ ಮಾಡಿದ್ದಾರೆ.