alex Certify ಲಾಕ್ ಡೌನ್ ನಡುವೆ ತೆಲುಗು ನಟ ನಿಖಿಲ್ ವಿವಾಹ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಡುವೆ ತೆಲುಗು ನಟ ನಿಖಿಲ್ ವಿವಾಹ ಸಂಭ್ರಮ

ಹ್ಯಾಪಿ ಡೇಸ್, ಆಲಸ್ಯಂ ಅಮೃತಂ, ಕಾರ್ತಿಕೇಯ, ಕಿರಿಕ್ ಪಾರ್ಟಿ ಹೀಗೆ ವಿವಿಧ ಹಿಟ್ ಚಿತ್ರಗಳನ್ನು ನೀಡಿದ ತೆಲುಗು ಚಿತ್ರ ನಟ ನಿಖಿಲ್ ಸಿದ್ದಾರ್ಥ ಗುರುವಾರ ಹೈದ್ರಾಬಾದ್ ನಲ್ಲಿ ಸಪ್ತಪದಿ ತುಳಿದರು.

ಕೆಲವೇ ಕೆಲವು ಕುಟುಂಬ ಸದಸ್ಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಅವರು ಡಾಕ್ಟರ್ ಪಲ್ಲವಿ ಶರ್ಮಾರನ್ನು ವರಿಸಿದ್ದಾರೆ.

ವಿವಾಹ ಪೂರ್ವ ಹಾಗೂ ವಿವಾಹ ಸಂದರ್ಭದ ಫೋಟೋ, ವಿಡಿಯೋವನ್ನು ಹಂಚಿಕೊಂಡಿರುವ ನಿಖಿಲ್ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ.

ಅರಿಶಿನ ಶಾಸ್ತ್ರದ ಫೋಟೋ ಹಾಕಿಕೊಂಡಿರುವ ನಿಖಿಲ್, ಮದುವೆ ಗಂಡು ರೆಡಿ ಎಂದು ಶೀರ್ಷಿಕೆ ನೀಡಿದ್ದಾರೆ. ವಧು ಪಲ್ಲವಿ ಕೆಂಪು ಬಣ್ಣದ ಕಾಂಜೀವರಂ ಸೀರೆಯಲ್ಲಿ ಮಿಂಚಿದರೆ, ನಿಖಿಲ್ ಗೋಲ್ಡನ್ ಹಾಗೂ ಕೆಂಪು ಬಣ್ಣದ ಶೇರ್ವಾನಿಯಲ್ಲಿ ಕಾಣಿಸಿಕೊಂಡರು.

ಏಪ್ರಿಲ್ 16ರಂದು ವಿವಾಹ ನಿಗದಿಪಡಿಸಲಾಗಿತ್ತಾದರೂ ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಮುಂದೂಡಲ್ಪಟ್ಟಿತು. ಗುರುವಾರ ನಡೆದ ವಿವಾಹ ಕಾರ್ಯಕ್ರಮದಲ್ಲಿ 30 ಮಂದಿ ಮಾತ್ರ ಪಾಲ್ಗೊಂಡಿದ್ದು ಎಲ್ಲರೂ ಮಾಸ್ಕ್ ಧರಿಸಿದ್ದರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...