alex Certify BREAKING​: ತಮಿಳಿನ ಖ್ಯಾತ ನಟಿ ಹೋಟೆಲ್​​ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING​: ತಮಿಳಿನ ಖ್ಯಾತ ನಟಿ ಹೋಟೆಲ್​​ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣು

ತಮಿಳು ಚಿತ್ರರಂಗದ ಹೆಸರಾಂತ ನಟಿ ವಿ.ಜೆ. ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನಪ್ರಿಯ ಕಾರ್ಯಕ್ರಮವಾದ ಪಾಂಡಿಯನ್​ ಸ್ಪೋರ್ಸ್​ನಲ್ಲಿ ಮುಲ್ಲೈ ಪಾತ್ರದಲ್ಲಿ ಖ್ಯಾತಿಗಳಿಸಿದ್ದ ಈ ನಟಿಯ ಶವ ನಜರೆತ್​​ಪಟ್ಟೈನ ಪಂಚತಾರಾ ಹೋಟೆಲ್​ನಲ್ಲಿ ಪತ್ತೆಯಾಗಿದೆ.
ವಿಜೆ ಚಿತ್ರಾ ಇವಿಪಿ ಫಿಲಂ ಸಿಟಿಯಲ್ಲಿ ಶೂಟಿಂಗ್​​ ಮುಗಿಸಿ ಇಂದು ಮುಂಜಾನೆ 2.30ರ ಸುಮಾರಿಗೆ ತಮ್ಮ ಹೋಟೆಲ್​ ಕೋಣೆಗೆ ಮರಳಿದ್ದರು ಎನ್ನಲಾಗಿದೆ. ಮೃತ ನಟಿಗೆ ಉದ್ಯಮಿ ಹೇಮಂತ್​ ಎಂಬವರ ಜೊತೆ ವಿವಾಹ ಕೂಡ ನಿಶ್ಚಯವಾಗಿತ್ತು.
ವಿಜೆ ಚಿತ್ರಾ ತಮಿಳು ಚಿತ್ರರಂಗದಲ್ಲಿ ವಿವಿಧ ಚಾನೆಲ್​ಗಳ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಪಾಂಡಿಯನ್​ ಸ್ಟೋರ್ಸ್ ಧಾರವಾಹಿಯಲ್ಲಿ ಕಾಣಿಸಿಕೊಳ್ತಿದ್ದರು. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿದ್ದ ನಟಿ ಸಾಕಷ್ಟು ಪೋಸ್ಟ್​ಗಳ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದರು .
ವಿಜೆ ಚಿತ್ರಾ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪ್ರತಿಭಾವಂತ ನಟಿ ನಿಧನಕ್ಕೆ ಅಭಿಮಾನಿ ಬಳಗ ಟ್ವಿಟರ್​ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಕಂಬನಿ ಮಿಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...