alex Certify ಈ ಕಾರಣಕ್ಕೆ ಏಕಾಏಕಿ ಇಳಿಕೆಯಾಗಿದೆ ಅಲಿಯಾ ಭಟ್ ಫಾಲೋವರ್ಸ್‌ ಸಂಖ್ಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಏಕಾಏಕಿ ಇಳಿಕೆಯಾಗಿದೆ ಅಲಿಯಾ ಭಟ್ ಫಾಲೋವರ್ಸ್‌ ಸಂಖ್ಯೆ…!

ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್ ನ ಸ್ವಜನಪಕ್ಷಪಾತದ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆಯುತ್ತಿದೆ. ಇದೇ ವೇಳೆ ಈ ಬೆಳವಣಿಗೆ ನಟ-ನಟಿಯರ ಫಾಲೋವರ್ ಗಳ ಮೇಲೆ ಪರಿಣಾಮ ಬೀರಿದೆ.

ಸಾಕಷ್ಟು ಮಂದಿ ಬಾಲಿವುಡ್ ನಟ – ನಟಿಯರು ಸಾಮಾಜಿಕ‌‌ ಜಾಲತಾಣದಲ್ಲಿ ಫಾಲೋವರ್ ಗಳನ್ನು ಕಳೆದುಕೊಂಡಿದ್ದು, ನಟಿ ಅಲಿಯಾ ಭಟ್ ಅತಿ ಹೆಚ್ಚಿ‌ನ ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಕರಣ್ ಜೋಹರ್, ಸೋನಂ ಕಪೂರ್, ಸಲ್ಮಾನ್ ಖಾನ್ ಹೆಚ್ಚಿನ ಅಭಿಮಾನಿಗಳನ್ನು ಕಳೆದುಕೊಂಡಿದ್ದಾರೆ.

ಚಿತ್ರರಂಗದಲ್ಲಿ ತಳವೂರಿದ ಸ್ಟಾರ್ ಮಕ್ಕಳು ಮಾತ್ರ ಈ ಉದ್ಯಮದಲ್ಲಿ ಉಳಿಯಲು ಸಾಧ್ಯ, ಹೊರಗಿನವರಿಗೆ ಅವಕಾಶ ನಿರಾಕರಿಸಲಾಗುತ್ತದೆ, ಸ್ವಜನಪಕ್ಷಪಾತ ಉತ್ತೇಜಿಸುತ್ತದೆ ಎಂಬ ಟೀಕೆ-ಟಿಪ್ಪಣಿಗಳು ಬಂದಿದ್ದವು.

ಅಲಿಯಾ ಭಟ್ 444 K ಫಾಲೋವರ್ಸ್ ಕಳೆದುಕೊಂಡಿದ್ದರೆ, ಕರಣ್ ಜೋಹರ್ 188K, ಸಲ್ಮಾನ್ ಖಾನ್ 50K ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆಂಬ ಮಾಹಿತಿ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...