alex Certify ‘ಪವಿತ್ರಾ ರಿಶ್ತಾ-2’ಗೆ ಸುಶಾಂತ್ ಅಭಿಮಾನಿಗಳಿಂದ ಬಹಿಷ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪವಿತ್ರಾ ರಿಶ್ತಾ-2’ಗೆ ಸುಶಾಂತ್ ಅಭಿಮಾನಿಗಳಿಂದ ಬಹಿಷ್ಕಾರ

Sushant Singh Rajput Fans Call to Boycott Pavitra Rishta 2, Ankita Lokhande Trolled

ನಟ ಸುಶಾಂತ್ ಸಿಂಗ್ ಅವರನ್ನು ಕಳೆದುಕೊಂಡಿರುವ ಬಾಲಿವುಡ್ ಗೆ ತುಂಬಲಾರದ ನಷ್ಟವುಂಟಾಗಿದೆ. ಸುಶಾಂತ್ ಸಿಂಗ್ ಬೆಳ್ಳಿತೆರೆಗೆ ಬರುವ ಮೊದಲು ಧಾರಾವಾಹಿಯಲ್ಲಿ ಅಭಿನಯಿಸಿ ಮನೆಮಾತಾದವರು. ‌

2009ರಲ್ಲಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪವಿತ್ರಾ ರಿಶ್ತಾದಲ್ಲಿ ಅಭಿನಯಿಸಿದ್ದರು. ಇದೀಗ ಈ ಧಾರಾವಾಹಿಯ ಮುಂದುವರಿದ ಭಾಗ ಪವಿತ್ರಾ ರಿಶ್ತಾ-2 ಪ್ರಸಾರವಾಗಲಿದ್ದು, ಇದಕ್ಕೆ ಸುಶಾಂತ್ ಅಭಿಮಾನಿಗಳು ಬಹಿಷ್ಕಾರ ಹಾಕಿದ್ದಾರೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಅಭಿಮಾನಿಗಳು ಪವಿತ್ರಾ ರಿಶ್ತಾ-2ಗೆ ಬಹಿಷ್ಕಾರ ಹಾಕಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ನಟಿಸಲು ಅಂಕಿತಾ ಒಪ್ಪಿದ್ದಕ್ಕೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ. ಸುಶಾಂತ್ ಸ್ಥಾನಕ್ಕೆ ಯಾರೂ ಕೂಡ ಸರಿಸಮಾನರಾಗಲು ಸಾಧ್ಯವಿಲ್ಲ. ಪವಿತ್ರಾ ರಿಶ್ತಾ ಪ್ರಸಿದ್ಧಿ ಪಡೆದದ್ದು ಸುಶಾಂತ್ ಅವರಿಂದಾಗಿ ಮಾತ್ರ. ʼನಮ್ಮ ಮಾನವ್ ಸುಶಾಂತ್ ಮಾತ್ರʼ ಎಂದು ಹ್ಯಾಷ್ ಟ್ಯಾಗ್ ಮಾಡುವ ಮೂಲಕ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಮುಂದಿನ ವಾರ ಮತ್ತೊಂದು ಸುತ್ತಿನ ಅನ್​ಲಾಕ್​: ನೈಟ್​ ಕರ್ಫ್ಯೂನಿಂದ ವಿನಾಯ್ತಿ, ಪಬ್​ಗಳು ಪುನಾರಂಭ ಸಾಧ್ಯತೆ

ಇನ್ನು ಪವಿತ್ರಾ ರಿಶ್ತಾ-2ನಲ್ಲಿ ಸುಶಾಂತ್ ಸ್ಥಾನಕ್ಕೆ ಶಾಹೀರ್ ಶೇಖ್ ಅವರನ್ನು ಕರೆತರಲಾಗಿದೆ. ಇವರು ಮಹಾಭಾರತ ಧಾರಾವಾಹಿಯಲ್ಲಿ ಅರ್ಜುನನ ಪಾತ್ರ ನಿರ್ವಹಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...