alex Certify ಡ್ರಗ್ಸ್ ಪ್ರಕರಣ: ಸಾರಾ ಅಲಿ ಖಾನ್ ವಿಚಾರಣೆ ನಡೆಸಲಿದೆ ಎನ್ ಸಿ ಬಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಪ್ರಕರಣ: ಸಾರಾ ಅಲಿ ಖಾನ್ ವಿಚಾರಣೆ ನಡೆಸಲಿದೆ ಎನ್ ಸಿ ಬಿ…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದ ಬಗ್ಗೆ ವಿಚಾರಣೆ ಚುರುಕು ಪಡೆದಿದೆ. ದಿನಕ್ಕೊಂದು ಮಾಹಿತಿ ಎನ್ ಸಿಬಿಗೆ ಸಿಗ್ತಿದೆ. ಈಗಾಗಲೇ ನಟಿ ರಿಯಾ ಚಕ್ರವರ್ತಿ ಬಂಧನವಾಗಿದೆ. ವಿಚಾರಣೆ ವೇಳೆ ರಿಯಾ 25 ಬಾಲಿವುಡ್ ಕಲಾವಿದರ ಹೆಸರು ಹೇಳಿದ್ದಾಳೆ ಎನ್ನಲಾಗಿದೆ. ಅದ್ರಲ್ಲಿ ಬಾಲಿವುಡ್ ನಟಿ ಹಾಗೂ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಕೂಡ ಸೇರಿದ್ದಾರೆ.

ರಿಯಾ ವಿಚಾರಣೆ ವೇಳೆ ಅನೇಕ ವಿಷ್ಯಗಳನ್ನು ಹೇಳಿದ್ದಾಳೆ. ಸುಶಾಂತ್ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದ ವೇಳೆ ಸಾರಾ ಕೂಡ ಅವನ ಜೊತೆ ಹೋಗಿದ್ದಳು. ಸ್ನೇಹಿತರ ಈ ಪ್ರವಾಸಕ್ಕೆ ಸುಶಾಂತ್ 70 ಲಕ್ಷ ರೂಪಾಯಿ ಖರ್ಚು ಮಾಡಿದ್ದ ಎಂದು ರಿಯಾ ಹೇಳಿದ್ದಾಳೆ.

ಇಷ್ಟೇ ಅಲ್ಲ ಕೆಲ ದಿನಗಳ ಹಿಂದೆ ಸುಶಾಂತ್ ಸ್ನೇಹಿತ ಸ್ಯಾಮ್ಯುಯೆಲ್ ಕೂಡ ಸಾರಾ ಬಗ್ಗೆ ಪೋಸ್ಟ್ ಹಾಕಿದ್ದರು. ಸಾರಾ ಹಾಗೂ ಸುಶಾಂತ್ ಸಿಂಗ್ ಕೇದಾರನಾಥ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದು ಸಾರಾ ಅಲಿ ಖಾನ್ ಮೊದಲ ಚಿತ್ರವಾಗಿತ್ತು. ಈ ಚಿತ್ರದ ಪ್ರಮೋಷನ್ ವೇಳೆ ನಾನು ಅವರಿಬ್ಬರನ್ನು ನೋಡಿದ್ದೇನೆ. ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಇತ್ತು. ಇಬ್ಬರು ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು. ಇಬ್ಬರ ಮಧ್ಯೆ ಪ್ರೀತಿಯಿತ್ತು ಎಂದು ಪೋಸ್ಟ್ ಹಾಕಿದ್ದರು.

ಈ ಎಲ್ಲ ಮಾಹಿತಿ ಸಿಕ್ಕ ನಂತ್ರ ಎನ್ ಸಿಬಿ ಸಾರಾ ಮೇಲೆ ಕಣ್ಣಿಟ್ಟಿದೆ. ಎನ್ ಸಿ ಬಿ ಡ್ರಗ್ಸ್ ಹಾಗೂ ಸಾರಾ ಮಧ್ಯೆ ಏನಾದ್ರೂ ನಂಟಿದೆಯಾ ಎನ್ನುವ ಬಗ್ಗೆ ವಿಚಾರಣೆ ಶುರು ಮಾಡುವ ಸಾಧ್ಯತೆಯಿದೆ. ಮೊದಲ ಐವರಿಗೆ ಎನ್ ಸಿ ಬಿ ನೊಟೀಸ್ ನೀಡುವ ಸಾಧ್ಯತೆಯಿದೆ. ನಂತ್ರ 20 ಜನರನ್ನು ವಿಚಾರಣೆ ನಡೆಸಲಿದೆ ಎನ್ನಲಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...