alex Certify ಹಳ್ಳಿ ಅಭಿಮಾನಕ್ಕೆ ಮನಸೋತ ನೀಲಿಚಿತ್ರ ತಾರೆ, ಅನಾಥ ಮಕ್ಕಳ ತಾಯಿ ಎಂದ ಅಭಿಮಾನಿಗಳಿಗೆ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳ್ಳಿ ಅಭಿಮಾನಕ್ಕೆ ಮನಸೋತ ನೀಲಿಚಿತ್ರ ತಾರೆ, ಅನಾಥ ಮಕ್ಕಳ ತಾಯಿ ಎಂದ ಅಭಿಮಾನಿಗಳಿಗೆ ಫಿದಾ

ಖ್ಯಾತ ನಟಿ ಸನ್ನಿ ಲಿಯೋನ್ ಮೇ 13 ರಂದು ಜನ್ಮದಿನ ಆಚರಿಸಿಕೊಂಡಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ 40 ನೇ ವಸಂತಕ್ಕೆ ಕಾಲಿಟ್ಟಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ರಾಜ್ಯದಲ್ಲಿಯೂ ಅವರಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ಸನ್ನಿ ಲಿಯೋನ್ ಅಭಿಮಾನಿಗಳು ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನಾಥ ಮಕ್ಕಳ ದತ್ತು ಪಡೆದು ಸಾಕುತ್ತಿರುವ ನೆಚ್ಚಿನ ನಟಿಗೆ ಅಭಿಮಾನ ವ್ಯಕ್ತಪಡಿಸುವ ಸಲುವಾಗಿ ಹುಟ್ಟುಹಬ್ಬದ ದಿನ ‘ಅನಾಥ ಮಕ್ಕಳ ತಾಯಿ ಅಭಿಮಾನಿಗಳ ದೇವತೆಗೆ ಜನ್ಮದಿನದ ಶುಭಾಶಯಗಳು’ ಎಂದು ಫ್ಲೆಕ್ಸ್ ಹಾಕಲಾಗಿದೆ.

ರಾಜ್ಯದ ಹಳ್ಳಿಯ ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಧನ್ಯವಾದ ಹೇಳಿದ್ದಾರೆ. ನೀಲಿ ಚಿತ್ರಗಳಿಗೆ ವಿದಾಯ ಹೇಳಿದ ಸನ್ನಿ ಲಿಯೋನ್ ಹಿಂದಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಐಟಂ ಸಾಂಗ್ ಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕನ್ನಡದಲ್ಲಿಯೂ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...