alex Certify ಖಾಸಗಿ ಜೀವನಕ್ಕೆ ಧಕ್ಕೆ ತಂದ ಫೋಟೋಗ್ರಾಫರ್‌ ವಿರುದ್ದ ಅನುಷ್ಕಾ ಶರ್ಮಾ ಗರಂ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಜೀವನಕ್ಕೆ ಧಕ್ಕೆ ತಂದ ಫೋಟೋಗ್ರಾಫರ್‌ ವಿರುದ್ದ ಅನುಷ್ಕಾ ಶರ್ಮಾ ಗರಂ..!

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಖಾಸಗಿ ಜೀವನಕ್ಕೆ ಭಂಗ ತಂದಿದ್ದಾರೆ ಎಂಬ ಕಾರಣಕ್ಕೆ ನಟಿ ಅನುಷ್ಕಾ ಶರ್ಮಾ ಮಾಧ್ಯಮದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಿರಾಟ್​ ಕೊಹ್ಲಿ ಹಾಗೂ ಅನುಶ್ಕಾ ಶರ್ಮಾ ಬಾಲ್ಕನಿಯಲ್ಲಿ ಕುಳಿತಿದ್ದ ದೃಶ್ಯವನ್ನ ಮೀಡಿಯಾ ಹೌಸ್​ನಲ್ಲಿ ಕೆಲಸ ಮಾಡುವ ಕ್ಯಾಮರಾಮ್ಯಾನ್​ ಒಬ್ಬರು ಸೆರೆ ಹಿಡಿದಿದ್ದರು. ಈ ಫೋಟೋ ವೈರಲ್​ ಆದ ಬಳಿಕ ಇನ್ಸ್​ಟಾಗ್ರಾಂನಲ್ಲಿ ಆಕ್ರೋಶ ಹೊರ ಹಾಕಿರುವ ನಟಿ ಇಂತಹ ಕೆಲಸವನ್ನ ಈ ಕೂಡಲೇ ನಿಲ್ಲಿಸಿ ಎಂದು ವಾರ್ನಿಂಗ್​ ಕೊಟ್ಟಿದ್ದಾರೆ.

ಸಾಕಷ್ಟು ಬಾರಿ ಮನವಿ ಮಾಡಿದ ಬಳಿಕವೂ ನಮ್ಮ ಖಾಸಗಿ ಜೀವನಕ್ಕೆ ಭಂಗ ತರುತ್ತಲೇ ಇದ್ದೀರಿ. ಈ ಕೆಲಸವನ್ನ ಈ ಕೂಡಲೇ ನಿಲ್ಲಿಸಿ ಅಂತಾ ಬರೆದುಕೊಂಡಿದ್ದಾರೆ.

ಕಳೆದ ವರ್ಷದ ಅಗಸ್ಟ್​ನಲ್ಲಿ ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದ್ರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ರು. ಈ ತಿಂಗಳಲ್ಲೇ ವಿರುಷ್ಕಾ ದಂಪತಿಗೆ ಮೊದಲ ಮಗುವಿನ ಜನನವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...