alex Certify ಜೇಬಿನಲ್ಲಿ ಹಣವಿಲ್ಲವೆಂದ್ರೂ ಬ್ಯುಸಿನೆಸ್ ಶುರು ಮಾಡಲು ನೆರವಾಗಲಿದ್ದಾರೆ ಈ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೇಬಿನಲ್ಲಿ ಹಣವಿಲ್ಲವೆಂದ್ರೂ ಬ್ಯುಸಿನೆಸ್ ಶುರು ಮಾಡಲು ನೆರವಾಗಲಿದ್ದಾರೆ ಈ ನಟ

ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಜನರಿಗೆ ನೆರವಾಗಿದ್ದಾರೆ. ವಲಸೆ ಕಾರ್ಮಿಕರಿಗೆ ಸೋನು ಸೂದ್ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಲಾಕ್ ಡೌನ್ ನಂತ್ರವೂ ಸೋನು ಸೂದ್ ತಮ್ಮ ಕೆಲಸವನ್ನು ಬಿಟ್ಟಿಲ್ಲ. ಸೋನು, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲ ವರ್ಗದ ಜನರಿಗ ನೆರವಾಗುತ್ತಿದ್ದಾರೆ. ಈಗ ಮತ್ತೊಮ್ಮೆ ಸಹಾಯ ಮಾಡಲು ಸೋನು ಮುಂದೆ ಬಂದಿದ್ದಾರೆ.

ಸೋನು ಸೂದ್ ಈಗ ನಿರುದ್ಯೋಗಿ ಯುವಕರಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ. ಜೇಬಿನಲ್ಲಿ ಹಣವಿಲ್ಲವೆಂದ್ರೂ ನಿಮ್ಮ ಸ್ವಂತ ಉದ್ಯೋಗ ಶುರು ಮಾಡುವುದು ಸಾಧ್ಯ ಎಂಬ ಭರವಸೆಯೊಂದಿಗೆ ಸೋನು ಈಗ ಮತ್ತೆ ಬಂದಿದ್ದಾರೆ. ಟ್ವೀಟರ್ ನಲ್ಲಿ ಸೋನು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಟ್ವಿಟರ್ ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಸೋನು, ಸಿದ್ಧರಾಗಿರಿ ಎಂದು ಶೀರ್ಷಿಕೆ ಹಾಕಿದ್ದಾರೆ. ಅವ್ರು ಹಾಕಿರುವ ಪೋಸ್ಟರ್ ನಲ್ಲಿ, ಹಣವಿಲ್ಲದೆ ನಿಮ್ಮ ಸ್ವಂತ ಉದ್ಯೋಗ ಶುರು ಮಾಡಿ. ನಿಮ್ಮ ಹಳ್ಳಿಯಲ್ಲೇ ಬ್ಯುಸಿನೆಸ್ ಮಾಡಲು ಅವಕಾಶವಿದೆ. ಈ ಮೂಲಕ ನಿಮ್ಮ ಗ್ರಾಮದ ಯುವಕರನ್ನು ಸಬಲೀಕರಣಗೊಳಿಸಲು ಪ್ರಯತ್ನಿಸೋಣವೆಂದು ಬರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸೋನು ಪೋಸ್ಟರ್ ವೈರಲ್ ಆಗಿದೆ. ಜನರು ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ನೀಡ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...