alex Certify ಗ್ರಾಮೀಣ ವಿದ್ಯಾರ್ಥಿನಿಯರ ಪಾಲಿಗೆ ಬೆಳಕಾದ ಸೋನು ಸೂದ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ವಿದ್ಯಾರ್ಥಿನಿಯರ ಪಾಲಿಗೆ ಬೆಳಕಾದ ಸೋನು ಸೂದ್​..!

ಬಾಲಿವುಡ್​ ನಟ ಸೋನುಸೂದ್​ ತಮ್ಮ ನಟನಾ ಶೈಲಿಯ ಜೊತೆ ಜೊತೆಗೆ ಮಾನವೀಯ ಮೌಲ್ಯಗಳ ಮೂಲಕವೂ ಮನೆ ಮಾತಾದಂತವರು. ಲಾಕ್​ಡೌನ್​​ ಸಂದರ್ಭದಲ್ಲಿ ಕಾಲ್ನಡಿಗೆ ಮೂಲಕ ಹುಟ್ಟೂರಿಗೆ ಸಾಗುತ್ತಿದ್ದ ಅನೇಕ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಸಮಾಜ ಸೇವೆ ಮಾಡಿದ್ದಾರೆ.

ಆದರೆ ಸೂದ್​ರ ಈ ಮಾನವೀಯ ಬುದ್ಧಿ ಇಲ್ಲಿಗೆ ಕೊನೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಈ ನಟ ನಿರ್ಗತಿಕರಿಗೆ ಸಹಾಯ ಮಾಡಲು ಟ್ವಿಟರ್​ನ್ನ ಅವಲಂಬಿಸಿದ್ದಾರೆ. ಟ್ರ್ಯಾಕ್ಟರ್​ ಉಡುಗೊರೆಯಾಗಿ ನೀಡೋದ್ರಿಂದ ಹಿಡಿದು ಉದ್ಯೋಗ ಕಳೆದುಕೊಂಡವರಿಗೆ ಸಹಾಯ ಮಾಡುವ ಮೂಲಕ ಸೂದ್​ ಸದಾ ಸುದ್ದಿಯಲ್ಲೇ ಇರ್ತಾರೆ.

ಇದೀಗ ಉತ್ತರ ಪ್ರದೇಶದ ಮಿರ್ಜಾಪುರ ಹಾಗೂ ಸೋನ್​ಭದ್ರಾ ಜಿಲ್ಲೆಯಲ್ಲಿರುವ ವಿದ್ಯಾರ್ಥಿನಿಯರಿಗೆ ಸೈಕಲ್​ಗಳನ್ನ ನೀಡೋದಾಗಿ ಸೂದ್​ ಹೇಳಿದ್ದಾರೆ. ಈ ಹೆಣ್ಣುಮಕ್ಕಳು ವ್ಯಾಸಂಗಕ್ಕಾಗಿ 8 ರಿಂದ 15 ಕಿಲೋಮೀಟರ್​ ಪ್ರಯಾಣಿಸಬೇಕು ಎಂಬ ವಿಚಾರ ತಿಳಿದ ಸೂದ್​ ಈ ಸಹಾಯ ಮಾಡೋಕೆ ಮುಂದಾಗಿದ್ದಾರೆ.

ಸಂತೋಷ್​ ಚೌಹಾಣ್​ ಎಂಬ ಟ್ವೀಟರ್​ ಬಳಕೆದಾರರು ಈ ಹುಡುಗಿಯರ ಸಂಕಷ್ಟವನ್ನ ಟ್ವೀಟ್​ ಮಾಡುವ ಮೂಲಕ ಸೂದ್​ ಗಮನ ಸೆಳೆದಿದ್ದರು. ಸಂತೋಷ್​ ಟ್ವೀಟ್​ಗೆ ಕೂಡಲೇ ಪ್ರತಿಕ್ರಿಯಿಸಿದ ಸೂದ್, ಈ ಹಳ್ಳಿಯ ಪ್ರತಿಯೊಬ್ಬ ಹುಡುಗಿಯೂ ಸೈಕಲ್​ ಹೊಂದುತ್ತಾಳೆ. ಸದ್ಯದಲ್ಲೇ ನಿಮಗೆಲ್ಲ ಸೈಕಲ್​ ತಲುಪಲಿದೆ ಅಂತಾ ಭರವಸೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...