alex Certify BIG NEWS: ಬಾಲಿವುಡ್​ ನಟ ಸೋನು ಸೂದ್​ಗೆ ಕೊರೊನಾ ಸೋಂಕು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಾಲಿವುಡ್​ ನಟ ಸೋನು ಸೂದ್​ಗೆ ಕೊರೊನಾ ಸೋಂಕು….!

ಬಾಲಿವುಡ್​ ನಟ ಸೋನು ಸೂದ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಸ್ವತಃ ಸೋನು ಸೂದ್​ ಟ್ವಿಟರ್​ನಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಸದ್ಯ ಕ್ವಾರಂಟೈನ್​ನಲ್ಲಿ ಇದ್ದೇನೆ ಅಂತಾ ಮಾಹಿತಿ ನೀಡಿದ್ದಾರೆ.

ಸ್ನೇಹಿತರೆ, ನಿಮಗೆ ನಾನು ಈ ಮೂಲಕ ತಿಳಿಸುವುದು ಏನೆಂದರೆ ನನ್ನ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್​ ಬಂದಿದೆ. ಹೀಗಾಗಿ ನಾನು ಕ್ವಾರಂಟೈನ್​ಗೆ ಒಳಗಾಗಿದ್ದೇನೆ. ಚಿಂತಿಸುವಂತದ್ದು ಏನೂ ಇಲ್ಲ. ನಿಮ್ಮ ಕಷ್ಟಗಳಿಗೆ ಪರಿಹಾರ ನೀಡಲು ಈಗ ನನ್ನ ಬಳಿ ತುಂಬಾನೇ ಸಮಯವಿದೆ. ನೆನಪಿಡಿ. ನಿಮಗೆ ಏನೇ ಕಷ್ಟ ಬಂದರೂ ನಾನಿದ್ದೇನೆ ಎಂದು ಟ್ವೀಟಾಯಿಸಿದ್ದಾರೆ.

ಶುಕ್ರವಾರ ಸಂಜೆಯಷ್ಟೇ ಸೋನು ಸೂದ್​​ ಜನರಿಗೆ ಬೇಕಾದ ಅಗತ್ಯ ಸಹಾಯವನ್ನ ಮಾಡಲಾಗ್ತಿಲ್ಲ ಎಂದು ಟ್ವಿಟರ್​ನಲ್ಲಿ ಅಸಹಾಯಕತೆಯನ್ನ ವ್ಯಕ್ತಪಡಿಸಿದ್ರು. ಹೀಗಾಗಿ ಆದಷ್ಟು ಸುರಕ್ಷಿತವಾಗಿರಿ ಎಂದು ಜನರಲ್ಲಿ ಮನವಿ ಮಾಡಿದ್ದರು .

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...