alex Certify ರಸ್ತೆ ಬದಿಯಲ್ಲಿ ಕೂತು ಬ್ರೆಡ್​, ಮೊಟ್ಟೆ ಮಾರಿದ ನಟ ಸೋನು ಸೂದ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಬದಿಯಲ್ಲಿ ಕೂತು ಬ್ರೆಡ್​, ಮೊಟ್ಟೆ ಮಾರಿದ ನಟ ಸೋನು ಸೂದ್​..!

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ನಾನಾ ರೀತಿಯಲ್ಲಿ ದೇಶದ ಜನತೆಗೆ ನೆರವಾಗುವ ಮೂಲಕ ಬಾಲಿವುಡ್​ ನಟ ಸೋನು ಸೂದ್​ ತಾವೊಬ್ಬ ರಿಯಲ್​ ಹೀರೋ ಅನ್ನೋದನ್ನ ಸಾಬೀತು ಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸೋನು ಸೂದ್​ ಇನ್​ಸ್ಟಾಗ್ರಾಂನಲ್ಲಿ ಮೊಟ್ಟೆ, ಬ್ರೆಡ್​ ಸೇರಿದಂತೆ ಕೆಲ ವಸ್ತುಗಳನ್ನ ಮಾರಾಟ ಮಾಡ್ತಿರೋ ಫನ್ನಿ ವಿಡಿಯೋವೊಂದನ್ನ ಶೇರ್​ ಮಾಡಿದ್ದರು.

ಸೋಶಿಯಲ್​ ಮೀಡಿಯಾದಲ್ಲಿ ಜನತೆಯ ಸಹಾಯಕ್ಕೆ ಧಾವಿಸುವ ಸೋನು ಸೂದ್​ ಇದರ ಜೊತೆಯಲ್ಲಿ ಫನ್ನಿ ವಿಡಿಯೋಗಳನ್ನ ಮಾಡೋದಕ್ಕೂ ಫೇಮಸ್​ ಆಗಿದ್ದಾರೆ. ಈ ಬಾರಿ ಅವರು ತಮ್ಮ ವಿಡಿಯೋಗೆ ʼಸೋನು ಕಿ ಸೂಪರ್​ ಮಾರ್ಕೆಟ್ʼ​ ಎಂದು ಕರೆದಿದ್ದಾರೆ.

ಈ ಹಿಂದೆ ಮನೆಯಲ್ಲೇ ಬೆಳೆದ ನಿಂಬುವಿನಿಂದ ಪಾನಕ ತಯಾರಿಸಿದ್ದು ಮಾತ್ರವಲ್ಲದೇ ಅದರ ಮಹತ್ವವನ್ನೂ ಹೇಳಿದ್ದರು. ಕೆಲ ದಿನಗಳ ಹಿಂದಷ್ಟೇ ಅಭಿಮಾನಿಯೊಬ್ಬ ಸೋನು ಸೂದ್​ ಬಳಿ ತಮ್ಮ ಗರ್ಲ್​ಫ್ರೆಂಡ್​ಗೊಂದು ಮೊಬೈಲ್​ ಫೋನ್​ ಕೊಡಿಸುವಂತೆ ಮನವಿ ಮಾಡಿದ್ದರು. ಅಣ್ಣಾ, ನನ್ನ ಗರ್ಲ್​ಫ್ರೆಂಡ್​ ನನ್ನ ಬಳಿ ಐ ಫೋನ್​ ಕೇಳುತ್ತಿದ್ದಾಳೆ. ನಿಮ್ಮಿಂದ ಏನನ್ನಾದರೂ ಸಹಾಯ ನಿರೀಕ್ಷಿಸಬಹುದೇ ಎಂದು ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸೋನು ಸೂದ್​ ಅವಳ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನೀನು ಐ ಫೋನ್​ ಕೊಡಿಸಿದ್ರೆ ನಿನ್ನ ಬಳಿ ಏನೂ ಇರೋದಿಲ್ಲ ಎಂದು ಹೇಳಿದ್ದರು. ಸದ್ಯದಲ್ಲೇ ಸೋನು ಸೂದ್,​ ಅಕ್ಷಯ್​ ಕುಮಾರ್​ ಮುಖ್ಯಭೂಮಿಕೆಯಲ್ಲಿರುವ ʼಪೃಥ್ವಿರಾಜ್ʼ​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...