alex Certify ಮತ್ತೊಮ್ಮೆ ಮಾನವೀಯತೆ ಮೆರೆದ ಸೋನು ಸೂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ಮಾನವೀಯತೆ ಮೆರೆದ ಸೋನು ಸೂದ್

ಕೋವಿಡ್ ಸಂಕಟ ಕಾಲದಲ್ಲಿ ಅಸಹಾಯಕರ ನೆರವಿಗೆ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ದೆಹಲಿಯ ಹಿತೇಶ್ ಶರ್ಮಾ ಹೆಸರಿನ ರೋಗಿಯೊಬ್ಬರನ್ನು ಶ್ವಾಸಕೋಶ ಕಸಿ ಚಿಕಿತ್ಸೆಗೆ ಹೈದರಾಬಾದ್‌ಗೆ ಏರ್‌ಲಿಫ್ಟ್ ಮಾಡಲು ನೆರವಾಗಿದ್ದಾರೆ.

ವೈದ್ಯಕೀಯ ಸಿಬ್ಬಂದಿಯ ಸಲಹೆ ಮೇರೆಗೆ ಏರ್‌ ಆಂಬುಲೆನ್ಸ್‌ ಏರಿ ಹೈದರಾಬಾದ್‌ಗೆ ತೆರಳುತ್ತಿರುವ ಹಿತೇಶ್‌ರ ವಿಡಿಯೋವನ್ನು ಶೇರ್‌ ಮಾಡಿದ ಸೋನು, “ಹಿತೇಶ್ ಅವರು ಏಪ್ರಿಲ್‌ನಿಂದ ಕೋವಿಡ್ ವಿರುದ್ಧ ಹೋರಾಡುತ್ತಿದ್ದು, ಅವರು ಮತ್ತೆ ಗುಣಮುಖರಾಗಲು ನಿಮ್ಮೆಲ್ಲರ ಪ್ರಾರ್ಥನೆಗಳ ಅಗತ್ಯವಿದೆ” ಎಂದಿದ್ದಾರೆ.

‘ಆ ಫೋಟೋ’ ಇಟ್ಟುಕೊಂಡು ನನ್ನ ಹೆಸರು ತಳಕು ಹಾಕಬೇಡಿ ಎಂದ ಕುಮಾರಸ್ವಾಮಿ

ಇದೇ ಏಪ್ರಿಲ್‌ನಲ್ಲಿ ತಮ್ಮ ಶ್ವಾಸಕೋಶಗಳನ್ನು 85-90% ಹಾಳು ಮಾಡಿಕೊಳ್ಳುವಷ್ಟು ಗಂಭೀರವಾದ ಆರೋಗ್ಯ ಪರಿಸ್ಥಿತಿ ಎದುರಿಸುತ್ತಿದ್ದ ನಾಗ್ಪುರದ ಭಾರ್ತಿ ಎಂಬ 25 ವರ್ಷದ ಯುವತಿಯೊಬ್ಬರನ್ನು ಹೈದರಾಬಾದ್‌ಗೆ ಏರ್‌ಲಿಫ್ಟ್ ಮಾಡಿಸಿದ್ದರು. ದುರದೃಷ್ಟವಶಾತ್‌‌ ಭಾರ್ತಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...