alex Certify ಪೋಷಕರೊಂದಿಗಿನ ವಿಶೇಷ ಫೋಟೋ ಶೇರ್​ ಮಾಡಿದ ಶ್ರುತಿ ಹಾಸನ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರೊಂದಿಗಿನ ವಿಶೇಷ ಫೋಟೋ ಶೇರ್​ ಮಾಡಿದ ಶ್ರುತಿ ಹಾಸನ್..​..!

ಕಮಲ್​ ಹಾಸನ್​ ಪುತ್ರಿ ನಟಿ ಹಾಗೂ ಗಾಯಕಿ ಶ್ರುತಿ ಹಾಸನ್​ ಮಂಗಳವಾರ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಳೆಯ ಫೋಟೋವೊಂದನ್ನ ಶೇರ್​ ಮಾಡುವ ಮೂಲಕ ನೆನಪುಗಳನ್ನ ಮೆಲುಕು ಹಾಕಿದ್ದಾರೆ.

1980ರಲ್ಲಿ ನಟಿ ಸಾರಿಕಾರನ್ನ ವಿವಾಹವಾಗಿದ್ದ ಕಮಲ್​ ಹಾಸನ್​​​ಗೆ 1986ರಲ್ಲಿ ಮೊದಲ ಮಗು ಶ್ರುತಿ ಹಾಸನ್​ ಜನಿಸಿದ್ದರು, ಇದಾದ ಬಳಿಕ 1991ರಲ್ಲಿ ಅಕ್ಷರಾ ಜನಿಸಿದ್ರು.

ಸೋಮವಾರ ತಮ್ಮ ಅಭಿಮಾನಿಗಳ ಜೊತೆ ಇನ್​ಸ್ಟಾಗ್ರಾಂನಲ್ಲಿ ಏನಾದರೂ ಪ್ರಶ್ನೆ ಕೇಳಿ ಎಂದು ಹೇಳಿದ್ದರು. ಇದರಲ್ಲಿ ತಮ್ಮ ನೆಚ್ಚಿನ ಫೋಟೋ ವಿಭಾಗದಲ್ಲಿ ಈ ಫೋಟೋವನ್ನ ಶೇರ್​ ಮಾಡಿದ್ದಾರೆ. ಶ್ರುತಿ ಹಾಗೂ ಅಕ್ಷರಾ ಜೊತೆ ಕಮಲ್ ಹಾಸನ್​ ಸಾರಿಕಾ ದಂಪತಿ ಇರುವ ಮುದ್ದಾದ ಫೋಟೋ ಇದಾಗಿದೆ.

ನಿಮ್ಮ ತಂದೆಯೊದಿಗೆ ಕ್ಲಿಕ್ಕಿಸಿಕೊಂಡ ಅದ್ಭುತ ಫೋಟೋ ಶೇರ್​ ಮಾಡಿ ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ನಟಿ ಈ ಫೋಟೋ ಶೇರ್​ ಮಾಡಿದ್ದಾರೆ.

ಕಮಲ್ ಹಾಸನ್​ ಮೊದಲು ನೃತ್ಯಗಾರ್ತಿ ವಾಣಿ ಗಣಪತಿಯನ್ನ ವಿವಾಹವಾಗಿದ್ದರು. ವಿವಾಹವಾಗಿ 10 ವರ್ಷಗಳ ಬಳಿಕ ಈ ಜೋಡಿ ವಿಚ್ಛೇದನ ಪಡೆದಿತ್ತು.

ಲಾಕ್​ಡೌನ್​ ಸಮಯದಿಂದ ಶ್ರುತಿ ಹಾಸನ್​ ತಮ್ಮ ಬಾಯ್​ಫ್ರೆಂಡ್​ ಸಂತನು ಹಜಾರಿಕಾ ಜೊತೆ ವಾಸಿಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಸಂತನು ಹಾಗೂ ತಮ್ಮ ಫೋಟೊಗಳನ್ನ ಶ್ರುತಿ ಹಾಸನ್​ ಶೇರ್​ ಮಾಡಿದ್ದರು. ಈ ಫೋಟೋಗೆ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್​ಗಳ ಸುರಿಮಳೆಯನ್ನ ಹರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...