alex Certify BIG NEWS: ಪವರ್ ಸ್ಟಾರ್ ಪುನೀತ್ ಬರ್ತಡೇಗೆ ‘ಜೇಮ್ಸ್’ ರಿಲೀಸ್, ಅಪ್ಪುಗೆ ಶಿವಣ್ಣನ ಧ್ವನಿ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪವರ್ ಸ್ಟಾರ್ ಪುನೀತ್ ಬರ್ತಡೇಗೆ ‘ಜೇಮ್ಸ್’ ರಿಲೀಸ್, ಅಪ್ಪುಗೆ ಶಿವಣ್ಣನ ಧ್ವನಿ ಸಾಧ್ಯತೆ

ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ದಿನ ‘ಜೇಮ್ಸ್’ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ‘ಜೇಮ್ಸ್’ ಕೊಡುಗೆಯಾಗಿ ನೀಡಲು ಚಿತ್ರತಂಡ ಚಿಂತನೆ ನಡೆಸಿದೆ. 2022 ರ ಮಾರ್ಚ್ 17 ರಂದು ಪುನೀತ್ ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್’ ಬಿಡುಗಡೆ ಮಾಡಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಪುನೀತ್ ರಾಜಕುಮಾರ್ ಅಭಿನಯದ, ಚೇತನ್ ಕುಮಾರ್ ನಿರ್ದೇಶನದ ಭಾರಿ ನಿರೀಕ್ಷೆಯ ‘ಜೇಮ್ಸ್’ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಇನ್ನೊಂದಿಷ್ಟು ಚಿತ್ರೀಕರಣ ಬಾಕಿ ಉಳಿದಿದೆ ಎನ್ನಲಾಗಿದ್ದು, ‘ಜೇಮ್ಸ್’ ಚಿತ್ರದ ಡಬ್ಬಿಂಗ್ ವಿಚಾರವಾಗಿ ಶಿವಣ್ಣ ಅವರನ್ನು ಕೇಳಿಕೊಳ್ಳಲಾಗುವುದು. ಅಪ್ಪು ಅವರಿಗೆ ಧ್ವನಿ ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...