alex Certify ಮಕ್ಕಳಿಗೆ ತವರಿನ ಪರಂಪರೆ ಪರಿಚಯಿಸಿದ ನಟಿ ಶಿಲ್ಪಾ ಶೆಟ್ಟಿ: ಕುಟುಂಬ ಸಮೇತ ಕಟೀಲು ದೇವಾಲಯಕ್ಕೆ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ತವರಿನ ಪರಂಪರೆ ಪರಿಚಯಿಸಿದ ನಟಿ ಶಿಲ್ಪಾ ಶೆಟ್ಟಿ: ಕುಟುಂಬ ಸಮೇತ ಕಟೀಲು ದೇವಾಲಯಕ್ಕೆ ಭೇಟಿ

ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮಕ್ಕಳಿಗೆ ತಮ್ಮ ತವರಿನ ಪರಂಪರೆ ಪರಿಚಯಿಸಿದ್ದಾರೆ.

ಸಹೋದರಿ, ನಟಿ ಶಮಿತಾ ಶೆಟ್ಟಿ ಮತ್ತು ಮಕ್ಕಳಾದ ವಿಯಾನ್ ಮತ್ತು ಶಮಿಶಾ ಜೊತೆಗೆ ಅವರು ಕಟೀಲು ದುರ್ಗಾಪರಮೇಶ್ವರಿ ದರ್ಶನ ಮಾಡಿದ್ದಾರೆ. ಯಕ್ಷಗಾನ ವೀಕ್ಷಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ ವಿಡಿಯೋವನ್ನು ಇನ್‌ಸ್ಟಾ ಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಮೂಲ ಮೂಲವಾದ ಮಂಗಳೂರಿಗೆ ತೆರಳಿ ನಮ್ಮ ಕುಲದೇವಿ ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದೆವು. ನನ್ನ ಮಂಗಳೂರಿನ ಪರಂಪರೆ ಮತ್ತು ಸಂಸ್ಕೃತಿಯನ್ನು ನನ್ನ ಮಕ್ಕಳಿಗೆ ಪರಿಚಯಿಸುವ ಮೂಲಕ ನಾನು ಹೆಮ್ಮೆಪಡುತ್ತೇನೆ ಎಂದು ತಿಳಿಸಿದ್ದಾರೆ. ಹಿನ್ನೆಲೆಗಾಗಿ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರದ ವರಾಹ ರೂಪಂ ದೈವ ವಾ ರಿಷ್ಟಂ ಹಾಡನ್ನು ಆಯ್ಕೆ ಮಾಡಿದ್ದಾರೆ.

ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಸತ್ಯವತಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಯುಗಾದಿ ಹಬ್ಬದಂದು ಶಿಲ್ಪಾ ರೆಟ್ರೋ ಸ್ಟೈಲ್ ನಲ್ಲಿರುವ ತಮ್ಮ ಪಾತ್ರದ ಫಸ್ಟ್ ಲುಕ್ ಶೇರ್ ಮಾಡಿದ್ದರು.

https://www.instagram.com/theshilpashetty/

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...