alex Certify ಮನೆ ಮಾರ್ತೀರಾ ಎಂಬ ಪ್ರಶ್ನೆಗೆ ಶಾರೂಕ್​ ನೀಡಿದ ಉತ್ತರವೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮಾರ್ತೀರಾ ಎಂಬ ಪ್ರಶ್ನೆಗೆ ಶಾರೂಕ್​ ನೀಡಿದ ಉತ್ತರವೇನು ಗೊತ್ತಾ…?

ಬಾಲಿವುಡ್​ ಕಿಂಗ್​ ಖಾನ್​ ಶಾರೂಕ್​ ತಮ್ಮ ಪರಿಶ್ರಮದ ಮೂಲಕವೇ ನಟನಾ ಜಗತ್ತಿನಲ್ಲಿ ಹೆಸರು ಮಾಡಿದಂತವರು. ಇದೀಗ ತಮ್ಮ ಬ್ಯುಸಿ ಶೆಡ್ಯೂಲ್​ನಿಂದ ಕೊಂಚ ಬಿಡುವು ಮಾಡಿಕೊಂಡಿರುವ ನಟ ಶಾರೂಕ್​​ ಟ್ವಿಟರ್​ನಲ್ಲಿ ತಮ್ಮ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಶಾರೂಕ್​ ಖಾನ್​ರ ಮನೆ ʼಮನ್ನತ್ʼ​ನ್ನ ಮಾರುತ್ತೀರಾ..? ಅಥವಾ ನಿಮ್ಮ ಮನ್ನತ್​ ಮನೆಯಲ್ಲಿ ನಮಗೂ ಒಂದು ಕೋಣೆ ಬಾಡಿಗೆ ಸಿಗಬೋದಾ ಅಂತೆಲ್ಲ ಟ್ವೀಟಿಗರು ಪ್ರಶ್ನೆ ಹಾಕಿದ್ದಾರೆ. ಮನ್ನತ್​ ಎಂಬ ತಮ್ಮ ಮನೆಯ ಹೆಸರಿನ ಅರ್ಥವನ್ನ ಮೂಲವಾಗಿ ಇಟ್ಟುಕೊಂಡ ಎಸ್​ಆರ್​ಕೆ ಟ್ವೀಟಿಗರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಮನ್ನತ್​ ಅಂದರೆ ಕೋರಿಕೆ. ಕೋರಿಕೆಯನ್ನ ಎಂದಿಗೂ ಮಾರಾಟ ಮಾಡೋಕೆ ಆಗಲ್ಲ. ಅದನ್ನ ಬೇಡಿ ಪಡೆಯುವಂತದ್ದು. ಈ ಮಾತನ್ನ ನೀವು ನೆನಪಿನಲ್ಲಿ ಇಟ್ಟುಕೊಂಡರೆ ನೀವೂ ಕೂಡ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತೀರಾ ಅಂತಾ ಉತ್ತರ ನೀಡಿದ್ದಾರೆ. ಅಲ್ಲದೇ ಮನ್ನತ್​ನಲ್ಲಿ ಬಾಡಿಗೆ ಪಡೆಯೋಕೆ ಎಷ್ಟು ಹಣ ಕೇಳ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾರೂಕ್​​ 30 ವರ್ಷದ ಪರಿಶ್ರಮ ಅಂತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...