alex Certify ವಿದೇಶದಲ್ಲೂ ಬಾಲಿವುಡ್ ತಾರೆಯರು ಹೊಂದಿದ್ದಾರೆ ಸಾಕಷ್ಟು ಆಸ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಲ್ಲೂ ಬಾಲಿವುಡ್ ತಾರೆಯರು ಹೊಂದಿದ್ದಾರೆ ಸಾಕಷ್ಟು ಆಸ್ತಿ…!

ಬಾಲಿವುಡ್ ಕಲಾವಿದರು ಸಂಭಾವನೆಗೆ ತಕ್ಕಂತೆ ಆಸ್ತಿ ಮಾಡಿದ್ದಾರೆ. ಅನೇಕ ಕಂಪನಿಗಳಲ್ಲಿ ಹಣ ಹೂಡಿರುವ ಕಲಾವಿದರು, ದೇಶ-ವಿದೇಶಗಳಲ್ಲಿ ಆಸ್ತಿ ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡುವ ಬಾಲಿವುಡ್ ಸ್ಟಾರ್ ಪಟ್ಟಿಯಲ್ಲಿ ಮೊದಲಿರುವ ಅಕ್ಷಯ್ ಕುಮಾರ್ ಕೆನಡಾದಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ಗುಡ್ಡದ ಜಾಗವನ್ನು ಅವ್ರು ಖರೀದಿ ಮಾಡಿದ್ದಾರೆ. ಇಷ್ಟೇ ಅಲ್ಲ ಟೊರಾಂಟೋದಲ್ಲಿ ಅಪಾರ್ಟ್ಮೆಂಟ್ ಹೊಂದಿದ್ದಾರೆ.

ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿರುವ  ಶಾರುಖ್ ಖಾನ್, ದುಬೈನ ಪಾಮ್ ಜುಮೇರಾದಲ್ಲಿ ಮನೆ ಹೊಂದಿದ್ದಾರೆ. ಇದಲ್ಲದೆ ಲಂಡನ್‌ನ ಪಾರ್ಕ್ ಲೇನ್‌ನಲ್ಲಿ ಅವರ ಅಪಾರ್ಟ್ಮೆಂಟ್ ಇದೆ.

ಈಗ ಹಾಲಿವುಡ್‌ ನಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಕಡಿಮೆಯಿಲ್ಲ. ಮುಂಬೈ ಅಲ್ಲದೆ  ನ್ಯೂಯಾರ್ಕ್ ನಲ್ಲಿ ಭವ್ಯವಾದ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಪತಿ ನಿಕ್ ಜೊನಸ್, ಮದುವೆಗೆ ಮೊದಲು ಪಿಗ್ಗಿಗೆ ಲಾಸ್ ಏಂಜಲೀಸ್ನಲ್ಲಿರುವ ತಮ್ಮ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ದುಬೈನ ಜುಮೇರಾ ಗಾಲ್ಫ್ ಎಸ್ಟೇಟ್ ನಲ್ಲಿ ಐಶಾರಾಮಿ ಬಂಗಲೆ ಹೊಂದಿದ್ದಾರೆ. ಪ್ರವಾಸಕ್ಕೆಂದು ಹೋಗುವ ಬಚ್ಚನ್ ದಂಪತಿ  ಫೇವರೇಟ್ ಪ್ಲೇಸ್ ದುಬೈ.

ಚಿತ್ರರಂಗದಿಂದ ದೂರವಿರುವ ಶಿಲ್ಪಾ ಶೆಟ್ಟಿ ಸಹ  ಐಷಾರಾಮಿ ಮನೆ ಹೊಂದಿದ್ದಾರೆ. ಲಂಡನ್ನಲ್ಲಿ ಐಷಾರಾಮಿ ಮಹಲ್ ಒಡತಿಯಾಗಿರುವ ಶಿಲ್ಪಾ ಶೆಟ್ಟಿ ಈ ಮಹಲ್ ಗೆ ರಾಜ್ ಮಹಲ್ ಎಂದು ಹೆಸರಿಟ್ಟಿದ್ದಾರೆ. ಅವರು ಸೆಂಟ್ರಲ್ ಲಂಡನ್ ನಲ್ಲಿ ಕೂಡ ಮನೆ ಖರೀದಿ ಮಾಡಿದ್ದಾರೆ.

ಬಿಗ್ ಬಿ ಅಮಿತಾಬ್ ಬಚ್ಚನ್, ಪತ್ನಿ ಜಯಾ ಬಚ್ಚನ್ ಗಾಗಿ ಪ್ಯಾರಿಸ್ ನಲ್ಲಿ ಮನೆ ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್ ಮುಂಬೈನಲ್ಲಿಯೇ ಐದು ಐಷಾರಾಮಿ ಬಂಗಲೆ ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...