alex Certify ಬ್ರಾ ಸೈಜ್​ ಕೇಳಿದವನಿಗೆ ಬೆವರಿಳಿಸಿದ ಟೆಲಿವಿಷನ್​ ತಾರೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಾ ಸೈಜ್​ ಕೇಳಿದವನಿಗೆ ಬೆವರಿಳಿಸಿದ ಟೆಲಿವಿಷನ್​ ತಾರೆ..!

ನಾಗಿಣಿ ಪಾತ್ರದ ಮೂಲಕವೇ ಹಿಂದಿ ಟೆಲಿವಿಷನ್​ ಲೋಕದಲ್ಲಿ ಹಲ್​ಚಲ್​ ಸೃಷ್ಟಿಸಿದ್ದ ನಟಿ ಸಯಂತಿನಿ ಘೋಷ್​​​ ಸೋಶಿಯಲ್​ ಮೀಡಿಯಾದಲ್ಲಿ ಬ್ರಾ ಸೈಜ್​ ಕೇಳಿದ ಕಿಡಿಗೇಡಿಗೆ ಮಾತಿನಲ್ಲೇ ಗುನ್ನಾ ನೀಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸುದೀರ್ಘ ಬರಹದ ಪೋಸ್ಟ್​​ನ್ನು ಸಯಂತಿನಿ ಶೇರ್​ ಮಾಡಿದ್ದಾರೆ. ನಿನ್ನೆ ಸಂದರ್ಶನದ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿ ನನ್ನ ಬ್ರಾ ಸೈಜ್​ ಕೇಳಿದ್ದಾರೆ. ನಾನು ಆ ವ್ಯಕ್ತಿಗೆ ಅಲ್ಲೇ ಸರಿಯಾದ ಉತ್ತರವನ್ನ ನೀಡಿದೆ. ಆದರೂ ನನಗೆ ಈ ವಿಚಾರವಾಗಿ ಮಾತನಾಡೋದು ಬಹಳಷ್ಟಿದೆ ಎಂದೆನಿಸಿತು. ಯಾವುದೇ ರೀತಿಯಲ್ಲಿ ಇನ್ನೊಬ್ಬರ ಅಂಗಾಂಗದ ಬಗ್ಗೆ ಆಡಿಕೊಳ್ಳೋದು ಒಳ್ಳೆಯದಲ್ಲ. ಎದೆ ದೇಹದ ಒಂದು ಅಂಗ ಎಂದು ಭಾವಿಸಿಕೊಳ್ಳಲು ಏಕೆ ಸಾಧ್ಯವಿಲ್ಲ..? ಹೆಣ್ಣುಮಕ್ಕಳ ಎದೆಯ ಬಗ್ಗೆ ಅಷ್ಟೊಂದು ವಿಭಿನ್ನವಾಗಿ ಕಾಣೋದು ಯಾಕೆ..? ಎಂದು ಪ್ರಶ್ನೆ ಮಾಡಿದ್ದಾರೆ.

ಪುರುಷರಿಗೆ ಈ ಅಧಿಕಾರವನ್ನ ನೀಡಿದವರು ಯಾರು..? ಎಷ್ಟೋ ಬಾರಿ ಮರ್ಯಾದೆಗೆ ಅಂಜಿ ಹೆಣ್ಣುಮಕ್ಕಳು ಇಂತಹ ಟೀಕೆಗಳ ಬಗ್ಗೆ ಮೌನ ವಹಿಸಿಬಿಡ್ತಾರೆ. ನಾನು ಕೂಡ ಎಷ್ಟೋ ಬಾರಿ ಪುರುಷನೊಬ್ಬ ನನ್ನ ಎದೆಯನ್ನ ಗುರಾಯಿಸುತ್ತಿದ್ದಾನೆ ಎಂದು ಗೊತ್ತಾದ ಬಳಿಕವೂ ಇರುಸುಮುರುಸು ಉಂಟಾಗಿದ್ದರಿಂದ ಅದರ ಬಗ್ಗೆ ಮಾತನಾಡದೇ ಸುಮ್ಮನಾಗಿದ್ದೇನೆ. ಆದರೆ ಇದೀಗ ಅತಿಯಾಗಿದೆ. ನಮಗಾಗಿ ನಾವು ನಿಂತುಕೊಳ್ಳಲೇಬೇಕು. ಯಾಕೆಂದರೆ ಇಂತಹ ಸಮಸ್ಯೆಗಳನ್ನ ಪರಿಹಾರ ಮಾಡೋಕೆ ಬೇರ್ಯಾರೂ ಬರೋದಿಲ್ಲ. ನಿಮ್ಮ ಅಂಗಾಂಗವನ್ನ ಅಗೌರವಿಸುವ ಯಾವುದೇ ಪುರುಷ ಹಾಗೂ ಮಹಿಳೆಯ ವಿರುದ್ಧ ಧ್ವನಿಯೆತ್ತುವ ಅಧಿಕಾರ ನಿಮಗಿದೆ ಎಂದು ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...