alex Certify ಕೊರೊನಾ ಲಸಿಕೆ ಪಡೆದು ಧನ್ಯವಾದ ಹೇಳಿದ ʼಮುನ್ನಾ‌ಭಾಯ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಪಡೆದು ಧನ್ಯವಾದ ಹೇಳಿದ ʼಮುನ್ನಾ‌ಭಾಯ್ʼ

Sanjay Dutt Gets His First COVID-19 Vaccine Shot. Read His Post

ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧ ಕೊರೊನಾ ಲಸಿಕೆಯ ಅಭಿಯಾನ ಬಹಳ ಚುರುಕುನಿಂದ ಸಾಗುತ್ತಿದೆ. ನಿನ್ನೆಯಷ್ಟೇ ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್​ 1ರಿಂದ ಲಸಿಕೆಯನ್ನ ಹಾಕಿಸಿಕೊಳ್ಳಿ ಎಂದು ಹೇಳಿದೆ. ಪ್ರಸ್ತುತ ದೇಶದಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಮಾತ್ರ ಲಸಿಕೆಯನ್ನ ನೀಡಲಾಗುತ್ತಿದೆ.

ಜನ ಸಾಮಾನ್ಯರು ಸೆಲೆಬ್ರಿಟಿಗಳೆನ್ನದೇ ಎಲ್ಲರೂ ಕೂಡ ಕೊರೊನಾ ಲಸಿಕೆಯನ್ನ ಹಾಕಿಸಿಕೊಳ್ತಿದ್ದಾರೆ. ಈ ನಡುವೆ ಬಾಲಿವುಡ್​ ನಟ ಸಂಜಯ್​ ದತ್​ ಕೂಡ ಇಂದು ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಪಡೆದಿದ್ದಾರೆ. ತಾವು ಲಸಿಕೆ ಪಡೆದಿರುವ ಬಗ್ಗೆ ಖುದ್ದು ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಶೇರ್​ ಮಾಡುವ ಮೂಲಕ ಮುನ್ನಾಭಾಯ್​ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸಂಜಯ್​ ದತ್​ ಲಸಿಕೆ ಹಾಕಿಸಿಕೊಳ್ತಿರೋದನ್ನ ನೀವು ನೋಡಬಹುದುಆಗಿದೆ.

ನಾವು ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಬಿಕೆಸಿ ಜಂಬೋ ಲಸಿಕಾ ಕೇಂದ್ರದಲ್ಲಿ ಹಾಕಿಸಿಕೊಂಡಿದ್ದೇನೆ. ನಾನು ಡಾ. ಧರೆ ಹಾಗೂ ಅವರ ಟೀಂನ್ನು ಶ್ಲಾಘಿಸಲು ಇಚ್ಚಿಸುತ್ತೇನೆ. ಈ ವೈದ್ಯರ ತಂಡದ ಪರಿಶ್ರಮಕ್ಕೆ ನನ್ನ ಮನಸ್ಸಲ್ಲಿ ತುಂಬಾ ಪ್ರೀತಿ ಹಾಗೂ ಗೌರವ ಇದೆ. ಜೈ ಹಿಂದ್​ ಎಂದು ಬರೆದುಕೊಂಡಿದ್ದಾರೆ.

ಸಂಜಯ್​ ದತ್​ಗೂ ಮೊದಲು ಹೇಮಾಮಾಲಿನಿ, ರಾಕೇಶ್​ ರೋಷನ್​, ಕಮಲ್​ ಹಾಸನ್​, ಸತೀಶ್​ ಷಾ  ಸೇರಿದಂತೆ ಅನೇಕ ಗಣ್ಯರು ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...