alex Certify SHOCKING: ಸಲ್ಮಾನ್ ಖಾನ್ ಹತ್ಯೆಗೆ ನಿವಾಸದ ಬಳಿಗೇ ಬಂದಿದ್ದ ಶಾರ್ಪ್ ಶೂಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಸಲ್ಮಾನ್ ಖಾನ್ ಹತ್ಯೆಗೆ ನಿವಾಸದ ಬಳಿಗೇ ಬಂದಿದ್ದ ಶಾರ್ಪ್ ಶೂಟರ್

ಮುಂಬೈ: ನಟ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೊಯ್ ಶಾರ್ಪ್ ಶೂಟರ್ ಒಬ್ಬನನ್ನು ನಿಯೋಜಿಸಿದ್ದ ಸಂಗತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವ ಕೊನೆಕ್ಷಣದಲ್ಲಿ ಶಾರ್ಪ್ ಶೂಟರ್ ಹಿಂದೆ ಸರಿದಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.

ಸಲ್ಮಾನ್ ಖಾನ್ ಪ್ರತಿದಿನ ಮನೆಯ ಬಳಿ ಸೈಕಲ್ ಸವಾರಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಇರುವುದಿಲ್ಲ ಎನ್ನುವುದನ್ನು ಶಾರ್ಪ್ ಶೂಟರ್ ಗೆ ತಿಳಿಸಲಾಗಿತ್ತು. ಸಣ್ಣ ಗನ್ ಒಂದನ್ನು ಹಾಕಿ ಸ್ಟಿಕ್ ಕೇಸ್ ನಲ್ಲಿ ಇರಿಸಿಕೊಂಡು ಶಾರ್ಪ್ ಶೂಟರ್ ಸಲ್ಮಾನ್ ಖಾನ್ ಮನೆಯವರೆಗೂ ತಲುಪಿದ್ದ. ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವ ಕೊನೆ ಕ್ಷಣದಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಹಿಂದೆ ಸರಿದಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಪೋಲಿಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...