alex Certify 500 ಕಾನ್ಸಂಟ್ರೇಟರ್‌ಗಳ ವ್ಯವಸ್ಥೆ ಮಾಡಿದ ಸಲ್ಮಾನ್ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

500 ಕಾನ್ಸಂಟ್ರೇಟರ್‌ಗಳ ವ್ಯವಸ್ಥೆ ಮಾಡಿದ ಸಲ್ಮಾನ್ ಖಾನ್

ತಮ್ಮ ಹೊಸ ಸಿನೆಮಾ ಅಂದುಕೊಂಡ ಮಟ್ಟದಲ್ಲಿ ಕೈಹಿಡಿಯದೇ ಇದ್ದರೂ ಸಹ ಬಾಲಿವುಡ್ ನಟ ಸಲ್ಮಾನ್ ಖಾನ್ ಒಳ್ಳೆಯದೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ಶಾಸಕ ಬಾಬಾ ಸಿದ್ದಿಕಿ ಹಾಗೂ ಆತನ ಪುತ್ರ ಜೀಶನ್ ಸಿದ್ದಿಕಿ ಜೊತೆಗೆ ಕೈಜೋಡಿಸಿರುವ ಬಾಲಿವುಡ್‌ ಭಾಯ್‌ಜಾನ್ ಕೋವಿಡ್-19 ತುರ್ತು ಅಗತ್ಯದಲ್ಲಿರುವ ಮಂದಿಗೆ ನೀಡಲೆಂದು 500 ಆಮ್ಲಜನಕ ಕಾನ್ಸಂಟ್ರೇಟರ್‌ಗಳ ವ್ಯವಸ್ಥೆ ಮಾಡಿದ್ದಾರೆ.

ಕಾನ್ಸಂಟ್ರೇಟರ್‌ಗಳ ಅಗತ್ಯವಿದ್ದವರಿಗೆಂದು ತುರ್ತು ಸಂಖ್ಯೆಯನ್ನು ಸಹ ವ್ಯವಸ್ಥೆ ಮಾಡಿರುವ ಸಲ್ಮಾನ್, ಒಮ್ಮೆ ಇವನ್ನು ಬಳಕೆ ಮಾಡಿದ ನಂತರ ಹಿಂದಿರುಗಿಸಬಹುದಾಗಿದೆ ಎಂದಿದ್ದಾರೆ.

ಕೋವಿಡ್ ಟೆಸ್ಟ್ ನಕಲಿ ವರದಿ; ಮೂವರು ವೈದ್ಯರು ಸೇರಿ 6 ಜನರ ಬಂಧನ

“ಆಮ್ಲಜನಕದ 500 ಕಾನ್ಸಂಟ್ರೇಟರ್‌ಗಳ ಮೊದಲ ಲಾಟ್‌ ಮುಂಬಯಿ ತಲುಪಿವೆ. ತುರ್ತಾಗಿ ಕಾನ್ಸಂಟ್ರೇಟರ್‌ಗಳ ಅಗತ್ಯವಿರುವ ಕೋವಿಡ್ ಪಾಸಿಟಿವ್‌ ಸಂತ್ರಸ್ತರು 845169785ಕ್ಕೆ ಕರೆ ಮಾಡಬಹುದಾಗಿದೆ. ಅಥವಾ ನೀವು ನನ್ನನ್ನು ಟ್ಯಾಗ್‌/ಡಿಎಂ ಮಾಡಬಹುದಾಗಿದೆ. ನಾವು ಕಾನ್ಸಂಟ್ರೇಟರ್‌ಗಳನ್ನು ಉಚಿತವಾಗಿ ವಿತರಿಸಲಿದ್ದೇವೆ, ದಯವಿಟ್ಟು ಅವುಗಳನ್ನು ಬಳಸಿದ ಬಳಿಕ ಮರಳಿಸಿ” ಎಂದು ಸಲ್ಮಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...