alex Certify ʼಕೊರೊನಾʼ ಸಂಕಷ್ಟದ ನಡುವೆ ಮುಂಚೂಣಿ ಕಾರ್ಯಕರ್ತರ ನೆರವಿಗೆ ನಿಂತ ಸಲ್ಮಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸಂಕಷ್ಟದ ನಡುವೆ ಮುಂಚೂಣಿ ಕಾರ್ಯಕರ್ತರ ನೆರವಿಗೆ ನಿಂತ ಸಲ್ಮಾನ್

ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​​ ಮುಂಚೂಣಿ ಕಾರ್ಯಕರ್ತರಿಗೆ ಉಚಿತ ಊಟವನ್ನ ನೀಡುವ ಮೂಲಕ ಕೊರೊನಾ ಸಂಕಷ್ಟಕ್ಕೆ ನೆರವಾಗಿದ್ದಾರೆ. ಫುಡ್​ ಪ್ಯಾಕೇಜ್​​ ಮುಂಚೂಣಿ ಕಾರ್ಯಕರ್ತರ ಕೈ ತಲುಪುವ ಮುನ್ನ ಸ್ವತಃ ಸಲ್ಮಾನ್​ ಖಾನ್​ ಈ ಆಹಾರ ಗುಣಮಟ್ಟವನ್ನ ಪರೀಕ್ಷೆ ಮಾಡುತ್ತಾರಂತೆ..!

ಯುವ ಸೇನಾ ಲೀಡರ್​ ರಾಹುಲ್​ ಕನಲ್​ ಕೂಡ ಸಲ್ಮಾನ್​ ಖಾನ್​ರ ಈ ಕಾರ್ಯಕ್ಕೆ ಸಾಥ್​ ನೀಡ್ತಿದ್ದಾರೆ. ಬಹುತೇಕ ಎಲ್ಲಾ ಅಂಗಡಿಗಳು ಬಂದ್​ ಆಗಿವೆ. ದಿನಸಿ ವಸ್ತುಗಳು ಸಹ ನಿಗದಿತ ಸಮಯಕ್ಕೆ ಮಾತ್ರ ಲಭ್ಯವಿದೆ.

ಈ ಸಂಕಷ್ಟದ ಸಂದರ್ಭದಲ್ಲಿ ಪೊಲೀಸ್​ ಅಧಿಕಾರಿಗಳು, ಬಿಎಂಸಿ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿಗೆ ಫುಡ್​ ಪ್ಯಾಕೇಜ್ ವ್ಯವಸ್ಥೆಯನ್ನ ಮಾಡಿಸಿದ್ದಾರೆ. ಈ ಫುಡ್​ ಪ್ಯಾಕೇಜ್​​ನಲ್ಲಿ ಟೀ, ನೀರು, ಬಿಸ್ಕೇಟ್​ ಪ್ಯಾಕೆಟ್​ ಹಾಗೂ ಉಪ್ಪಿಟ್ಟು, ಅವಲಕ್ಕಿ ವಡಾಪಾವ್​ನಂತಹ ಸ್ನ್ಯಾಕ್​​ಗಳು ಸೇರಿದೆ.‌

ಈ ಎಲ್ಲಾ ಫುಡ್​ ಪ್ಯಾಕೇಜ್​ಗಳು ಮುಂಚೂಣಿ ಕಾರ್ಯಕರ್ತರ ಕೈ ಸೇರುವ ಮುನ್ನ ಸಲ್ಮಾನ್​ ಖಾನ್​​ ಇದರ ಗುಣಮಟ್ಟವನ್ನ ಪರೀಕ್ಷೆ ಮಾಡ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...