alex Certify ಸಲ್ಮಾನ್ ಸಹೋದರಿ ಅರ್ಪಿತಾಗೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಮಾನ್ ಸಹೋದರಿ ಅರ್ಪಿತಾಗೆ ಕೊರೊನಾ

ಕೋವಿಡ್ ಸೋಂಕಿಗೆ ತತ್ತರಿಸುತ್ತಿರುವ ಜನಸಾಮಾನ್ಯರ ಗೋಳು ಒಂದು ಕಡೆಯಾದರೆ ಸೆಲೆಬ್ರಿಟಿಗಳಿಗೆ ಸೋಂಕು ತಗುಲುವ ವಿಚಾರಗಳು ಮಾಧ್ಯಮಗಳಲ್ಲಿ ರಾಷ್ಟ್ರಮಟ್ಟದ ಸುದ್ದಿಯಾಗುತ್ತಿವೆ.

ಬಾಲಿವುಡ್ ನಟ ಸಲ್ಮಾನ್ ಖಾನ್‌ನ ದತ್ತು ಸಹೋದರಿ ಅರ್ಪಿತಾ ಖಾನ್ ಶರ್ಮಾಗೆ ಕೋವಿಡ್-19 ಪಾಸಿಟಿವ್ ಕಂಡು ಬಂದಿದ್ದು, ಈ ವೇಳೆ ರೋಗದ ಯಾವುದೇ ಲಕ್ಷಣಗಳು ಆಕೆಯಲ್ಲಿ ಕಾಣಿಸಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಖುದ್ದು ಸಲ್ಮಾನ್ ಖಾನ್ ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದ ವೇಳೆ ಖಾತ್ರಿಪಡಿಸಿದ್ದಾರೆ.

ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್: ಹಿರಿಯ ನಟ ರಾಜಾರಾಂ ನಿಧನ

ಅರ್ಪಿತಾ ಕೂಡಾ ಇನ್‌ಸ್ಟಾಗ್ರಾಂನ ತಮ್ಮ ಖಾತೆ ಮೂಲಕ ಸ್ಪಷ್ಟಪಡಿಸಿದ್ದು, ತಮಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು ಸದ್ಯ ಆರಾಮಾಗಿ ಇರುವುದಾಗಿ ತಿಳಿಸಿದ್ದಾರೆ. “ಏಪ್ರಿಲ್ ತಿಂಗಳ ಆರಂಭದಲ್ಲಿ ನಾನು ಕೋವಿಡ್-19 ಪಾಸಿಟಿವ್‌ ಎಂದು ತಿಳಿದುಕೊಂಡೆ. ಆದರೆ ನನಗೆ ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ. ಈ ಸಂಬಂಧ ಇದ್ದ ಎಲ್ಲ ಮಾರ್ಗಸೂಚಿಗಳು ಹಾಗೂ ನಿಯಮಗಳನ್ನು ನಾನು ಪಾಲಿಸಿದೆ. ದೇವರ ದಯೆಯಿಂದ ನಾನು ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಕ್ಷೇಮವಾಗಿದ್ದೇನೆ” ಎಂದು ಅರ್ಪಿತಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...