alex Certify ಬಹುಕಾಲದ ಗೆಳತಿ ಜೊತೆ ʼಸಾಹೋʼ ನಿರ್ದೇಶಕನ ಎಂಗೇಜ್ಮೆಂಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುಕಾಲದ ಗೆಳತಿ ಜೊತೆ ʼಸಾಹೋʼ ನಿರ್ದೇಶಕನ ಎಂಗೇಜ್ಮೆಂಟ್…!

ಸಾವೋ ಸಿನಿಮಾ ಮೂಲಕ ಹೆಚ್ಚು ಹೆಸರು ಪಡೆದ ನಿರ್ದೇಶಕ ಸುಜಿತ್ ತಮ್ಮ ಬಹುದಿನದ ಗೆಳತಿಯೊಂದಿಗೆ ನಿನ್ನೆಯಷ್ಟೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನರಿಲ್ಲದೆ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ವೈದ್ಯೆ ಆಗಿರುವ ಪ್ರವಾಲಿಕಾ ಅವರನ್ನು ಸುಜಿತ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯನ್ನು ಮನೆಯವರ ಬಳಿ ಹೇಳಿಕೊಂಡಿದ್ದಾರೆ ಈ ಜೋಡಿ. ಇವರ ಪ್ರೀತಿಗೆ ಮನೆಯವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ನಿನ್ನೆ ಈ ಜೋಡಿ ಕೇವಲ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸಿಂಪಲ್ ಆಗಿ ಎಂಗೇಜ್ ಆಗಿದ್ದಾರೆ.

ಇನ್ನು ಈ ಜೋಡಿಯ ಮದುವೆ ದಿನಾಂಕ ಪ್ರಕಟವಾಗಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಸುಜಿತ್ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಚಿರಂಜೀವಿ ನಟಿಸಲಿರುವ ಮಲಯಾಳಂನ ಲೂಸಿಫರ್ ತೆಲುಗು ಸಿನಿಮಾ ರಿಮೇಕ್ ಆಗುತ್ತಿದ್ದು, ಸುಜಿತ್ ಈ ಸಿನಿಮಾವನ್ನು ನಿರ್ದೇಶನ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...