alex Certify ಈ ಕಾರಣಕ್ಕೆ ಸುದ್ದಿಯಾದ್ರು ಸುಶಾಂತ್‌ ಸಿಂಗ್‌ ಗೆಳತಿ ರಿಯಾ ಚಕ್ರವರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಸುದ್ದಿಯಾದ್ರು ಸುಶಾಂತ್‌ ಸಿಂಗ್‌ ಗೆಳತಿ ರಿಯಾ ಚಕ್ರವರ್ತಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಬಳಿಕ ನಟಿ ರಿಯಾ ಚಕ್ರವರ್ತಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ.

ಆದರೆ ಈ ಬಾರಿ ಅವರು ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಜಲೇಬಿ ಸಿನಿಮಾದ ನಟಿ ಬೀದಿ ನಾಯಿಗೆ ಆಹಾರವನ್ನ ನೀಡುತ್ತಿರುವ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ಮನೆಯ ಮೆಟ್ಟಿಲಲ್ಲಿ ಕುಳಿತಿರುವ ರಿಯಾ ಸುತ್ತ ಬೀದಿ ನಾಯಿಗಳು ಇರೋದನ್ನ ಕಾಣಬಹುದಾಗಿದೆ.

ಶ್ವಾನಗಳಿಗೆ ಡಾಗ್​ ಫುಡ್​ ಹಾಗೂ ಕುರುಕಲು ತಿಂಡಿಯನ್ನ ರಿಯಾ ನೀಡಿದ್ದಾರೆ. ಶ್ವಾನಗಳೂ ಸಹ ಬಹಳ ಖುಷಿಯಿಂದ ಆ ಕ್ಷಣವನ್ನ ಎಂಜಾಯ್​ ಮಾಡ್ತಿವೆ. ಈ ವಿಡಿಯೋವನ್ನ ಶೇರ್​ ಮಾಡಿರುವ ನಟಿ ರಿಯಾ, ಇವೆಲ್ಲ ನನ್ನ ಪ್ರೀತಿಯ ಶ್ವಾನಗಳು ಎಂದು ಶೀರ್ಷಿಕೆ ನೀಡಿದ್ದಾರೆ.

ರಿಯಾರ ಈ ಪೋಸ್ಟ್​​ಗೆ ನಟ ಹಾಗೂ ಉದ್ಯಮಿ ಪಿಯಾ ತ್ರಿವೇದಿ ಸೇರಿದಂತೆ ಅನೇಕರು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...