
ಉದ್ಯಮಿ ಇಂದ್ರಕುಮಾರ್ ಎಂಬವರ ಜೊತೆ 2010ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಇತ್ತೀಚೆಗಷ್ಟೇ 11 ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಸಂಭ್ರಮಿಸಿದ್ದರು. ಸದ್ಯ ಸಂಸಾರ ಸಮೇತ ಕೆನಡಾದಲ್ಲಿ ವಾಸಿಸುತ್ತಿರುವ ನಟಿ ರಂಭಾ ಮೂವರು ಮಕ್ಕಳ ಪ್ರೀತಿಯ ತಾಯಿ ಕೂಡ ಹೌದು. ಲಾನ್ಯ, ಸಾಶಾ ಹಾಗೂ ಶಿವಿನ್ ರಂಭಾರ ಮುದ್ದಿನ ಮಕ್ಕಳ ಹೆಸರಾಗಿದೆ.
ನಟಿ ರಂಭಾ ಸಿನಿ ರಂಗದಿಂದ ದೂರ ಸರಿದಿದ್ದರೂ ಸಹ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳನ್ನ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಪೋಸ್ಟ್ಗಳ ಮೂಲಕ ಅಭಿಮಾನಿಗಳ ಜೊತೆ ರಂಭಾ ಕನೆಕ್ಟ್ ಆಗಿದ್ದಾರೆ.
ದರ್ಶನ್ – ಪ್ರೇಮ್ ಕಾಂಬಿನೇಷನ್ ನಲ್ಲಿ ಮೂಡಿಬರಲಿದೆಯಾ ಸಿನಿಮಾ…? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ
ಏಪ್ರಿಲ್ ತಿಂಗಳಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ನಟಿ ರಂಭಾ ಮನೆಯಲ್ಲೇ ಪತಿ ಹಾಗೂ ಮಕ್ಕಳ ಜೊತೆ ವೆಡ್ಡಿಂಗ್ ಆನಿವರ್ಸರಿಯನ್ನ ಸಂಭ್ರಮಿಸಿದ್ದರು. ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಅವರ ಮಗಳು ಮಾಡಿದ ಗ್ರೀಟಿಂಗ್ ಕಾರ್ಡ್ನ್ನು ರಂಭಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನೀರುಗಳ್ಳತನ ತಡೆಯಲು ಸ್ಥಾಪನೆಯಾಗಿದೆ ಪೊಲೀಸ್ ಠಾಣೆ…!
ಈ ಫೋಟೋಗೆ ರಂಭಾ, 11 ವರ್ಷಗಳ ಜೊತೆಯಾಗಿರುವ ಈ ಸಂಭ್ರಮಕ್ಕೆ ನಮ್ಮ ಮಗಳು ಈ ಗೂಗ್ಲಿ ಕಾರ್ಡ್ನ್ನು ಉಡುಗೊರೆಯಾಗಿ ನೀಡಿದ್ದಾಳೆ ಎಂದು ಶೀರ್ಷಿಕೆ ನೀಡಿದ್ದಾರೆ.
1993ರಲ್ಲಿ ಸರ್ವರ್ ಸೋಮಣ್ಣ ಸಿನಿಮಾ ಮೂಲಕ ನಟಿ ರಂಭಾ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದರು. ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಬಾವ ಬಾಮೈದ, ಪಾಂಡುರಂಗ ವಿಠಲ, ಸಾಹುಕಾರ, ಗಂಡುಗಲಿ ಕುಮಾರ ರಾಮ ಹಾಗೂ ಕೊನೆಯದಾಗಿ ಅನಾಥರು ಸಿನಿಮಾದಲ್ಲಿ ರಂಭಾ ಕಾಣಿಸಿಕೊಂಡಿದ್ದಾರೆ.
https://www.instagram.com/p/CNbFwJtnCpC/?utm_source=ig_web_copy_link