alex Certify ವೃತ್ತಿ ಜೀವನದ ಕರಾಳ ದಿನಗಳನ್ನು ಬಿಚ್ಚಿಟ್ಟ ಖ್ಯಾತ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃತ್ತಿ ಜೀವನದ ಕರಾಳ ದಿನಗಳನ್ನು ಬಿಚ್ಚಿಟ್ಟ ಖ್ಯಾತ ನಟ

Relied On Alcohol": Class Of '83 Star Bobby Deol On Career Slump

ಬಾಲಿವುಡ್ ನಲ್ಲಿ ಹೆಸರು ಮಾಡಿದ ನಟರಲ್ಲಿ ಬಾಬಿ ಡಿಯೋಲ್ ಕೂಡ ಒಬ್ಬರು. ಒಂದು ಸಂದರ್ಭದಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಬಾಬಿ ಡಿಯೋಲ್ ಆ ದಿನಗಳು ಹಾಗೂ ಮದ್ಯ ವ್ಯಸನಿಯಾದ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಕ್ಲಾಸ್ ಆಫ್ 83 ಚಿತ್ರದ ಪ್ರಚಾರದ ಸಂದರ್ಭದಲ್ಲಿ ಬಾಬಿ ಡಿಯೋಲ್ ಈ ವಿಷ್ಯ ಹೇಳಿದ್ದಾರೆ.

1995 ರಲ್ಲಿ ಬರ್ಸಾತ್ ಚಿತ್ರದ ಮೂಲಕ ಬಾಬಿ ಡಿಯೋಲ್ ವೃತ್ತಿ ಜೀವನ ಶುರು ಮಾಡಿದ್ದರು. ಅನೇಕ ಹಿಟ್ ಚಿತ್ರಗಳನ್ನು ನೀಡಿದ ಬಳಿಕ ಬಾಬಿ ಡಿಯೋಲ್ ಕೈನಲ್ಲಿ ಚಿತ್ರವಿರಲಿಲ್ಲ. ಇದ್ರಿಂದ ನೊಂದಿದ್ದ ಅವರು ಮದ್ಯವ್ಯಸನಿಯಾಗಿದ್ದರಂತೆ. ನನಗೆ ಯಾರೂ ಕೆಲಸ ನೀಡುವುದಿಲ್ಲವೆಂಬ ಕಾರಣಕ್ಕೆ ಮದ್ಯ ವ್ಯಸನಿಯಾಗಿ ಮನೆಯಲ್ಲಿ ಕಾಲ ಕಳೆಯುತ್ತಿದ್ದೆ. ಆದ್ರೆ ನನ್ನ ಮಕ್ಕಳು ಹಾಗೂ ಪತ್ನಿ, ತಾಯಿ ಕಣ್ಣಲ್ಲಿ ಈತ ಸದಾ ಮನೆಯಲ್ಲಿರುತ್ತಾನೆಂಬ ಭಾವನೆ ಕಾಣಿಸಿತು. ಆಗ ನನ್ನನ್ನು ನಾನು ಬದಲಿಸಿಕೊಳ್ಳುವ ನಿರ್ಧಾರಕ್ಕೆ ಬಂದೆ. ಯಾರು ಕರೆದು ಕೆಲಸ ನೀಡುವುದಿಲ್ಲ. ನಮ್ಮ ಕೆಲಸ ನಾವು ಮಾಡಬೇಕೆಂಬ ನಿರ್ಧಾರ ತೆಗೆದುಕೊಂಡು ಕೆಲಸ ಶುರು ಮಾಡಿದೆ. ಕಳೆದ 2-3 ವರ್ಷಗಳಿಂದ ನಾನು ತುಂಬಾ ಬ್ಯುಸಿಯಾಗಿದ್ದೇನೆಂದು ಬಾಬಿ ಡಿಯೋಲ್ ಹೇಳಿದ್ದಾರೆ.

2018ರಲ್ಲಿ ರೇಸ್-3 ಮೂಲಕ ಮತ್ತೆ ಡಿಯೋಲ್ ಬಾಲಿವುಡ್ ಗೆ ವಾಪಸ್ ಆಗಿದ್ದರು. ಆಗ ಕೆಲಸ ನೀಡಿದ ಸಲ್ಮಾನ್ ಖಾನ್ ಗೆ ಧನ್ಯವಾದ ಹೇಳಿದ್ದರು. ಅದಾದ್ಮೇಲೆ ಡಿಯೋಲ್ ಯಮಲಾ-ಪಗಲಾ-ದಿವಾನಾ ಚಿತ್ರದಲ್ಲಿ ತಂದೆ ಧರ್ಮೇಂದ್ರ ಜೊತೆ ಕಾಣಿಸಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...