alex Certify ರಣಬೀರ್ ಗೆ ಕೊರೊನಾ : ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ನೀತು ಕಪೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಣಬೀರ್ ಗೆ ಕೊರೊನಾ : ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ನೀತು ಕಪೂರ್

ಬಾಲಿವುಡ್ ನಟ ರಣಬೀರ್ ಕಪೂರ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ರಣಬೀರ್ ಕಪೂರ್ ತಾಯಿ ನೀತು ಕಪೂರ್ ರಣಬೀರ್ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ರಣಬೀರ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆಂದು ಫೋಸ್ಟ್ ಮಾಡಿರುವ ನೀತು,ರಣಬೀರ್ ಆರೋಗ್ಯದ ಬಗ್ಗೆ ಅಪ್ಡೇಟ್ ಮಾಡಿದ್ದಾರೆ.

ನಿಮ್ಮ ಪ್ರಾರ್ಥನೆಗೆ ಧನ್ಯವಾದ. ರಣಬೀರ್ ಕಪೂರ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಮಾತ್ರೆಗಳನ್ನು ತೆಗೆದುಕೊಳ್ತಿದ್ದಾರೆ. ಆರೋಗ್ಯದಲ್ಲಿ ಸುಧಾರಣೆಯಾಗ್ತಿದೆ. ಮನೆಯಲ್ಲಿ ರಣಬೀರ್ ಕ್ವಾರಂಟೈನ್ ಆಗಿದ್ದಾರೆ. ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದಾರೆಂದು ನೀತು ಕಪೂರ್ ಹೇಳಿದ್ದಾರೆ.

ರಣಬೀರ್ ಕಪೂರ್ ಆರೋಗ್ಯದ ಬಗ್ಗೆ ಅನೇಕ ಸುದ್ದಿಗಳು ಹರಡಿದ್ದವು. ರಣಧೀರ್ ಕಪೂರ್,ರಣಬೀರ್ ಆರೋಗ್ಯ ಸರಿಯಿಲ್ಲವೆಂದಿದ್ದರು. ಆದ್ರೆ ಏನಾಗಿದೆ ಎನ್ನುವ ಬಗ್ಗೆ ಅವರು ಹೇಳಿರಲಿಲ್ಲ. ಈಗ ನೀತು,ರಣಬೀರ್ ಕಪೂರ್ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದು,ಅಭಿಮಾನಿಗಳು ನೆಮ್ಮದಿಯಾಗಿದ್ದಾರೆ. ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಕಮೆಂಟ್ ಹಾಕ್ತಿದ್ದಾರೆ.

ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಹಿಂದಿನ ವರ್ಷ ಏಪ್ರಿಲ್ 30ರಂದು ನಿಧನರಾಗಿದ್ದಾರೆ. ರಿಷಿ ಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕೊರೊನಾ,ಲಾಕ್ಡೌನ್ ಕಾರಣಕ್ಕೆ ರಿಷಿ ಕಪೂರ್ ಅಂತ್ಯ ಸಂಸ್ಕಾರವನ್ನು ಸರಳವಾಗಿ ಮಾಡಲಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...