alex Certify ಅಯೋಧ್ಯೆಯಲ್ಲಿ ಚಿತ್ರದ ಮುಹೂರ್ತ ನೆರವೇರಿಸಿದ ‘ರಾಮ್​ ಸೇತು’ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯೋಧ್ಯೆಯಲ್ಲಿ ಚಿತ್ರದ ಮುಹೂರ್ತ ನೆರವೇರಿಸಿದ ‘ರಾಮ್​ ಸೇತು’ ತಂಡ

ಬಾಲಿವುಡ್​ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ಅಕ್ಷಯ್​ ಕುಮಾರ್​​​ರ ಬಹು ನಿರೀಕ್ಷಿತ ಸಿನಿಮಾ ‘ರಾಮ್​ ಸೇತು’ ಅಯೋಧ್ಯೆಯಲ್ಲಿ ಮುಹೂರ್ತ ಕಂಡಿದೆ. ಅಭಿಷೇಕ್​ ಶರ್ಮಾ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿ ರಾಮ ಕಥಾವಸ್ತು ಆಗಿರೋದ್ರಿಂದ ಈ ಸಿನಿಮಾದ ಮುಹೂರ್ತವನ್ನ ಅಯೋಧ್ಯೆಯಲ್ಲೇ ನೆರವೇರಿಸಲಾಗಿದೆ. ಸಿನಿಮಾ ಮುಹೂರ್ತದ ಫೋಟೋಗಳನ್ನ ನಟ ಅಕ್ಷಯ್​ ಕುಮಾರ್​ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಬಾಲಿವುಡ್​ ಖಿಲಾಡಿಗೆ ಜೋಡಿಯಾಗಿ ಜಾಕ್ವೆಲಿನ್​ ಫರ್ನಾಂಡಿಸ್​ ಹಾಗೂ ನುಶ್ರತ್​ ಭಾರುಚ್ಚಾ ಕಾಣಿಸಿಕೊಳ್ಳಲಿದ್ದಾರೆ. ರಾಮ್​ ಸೇತುವಿನಲ್ಲಿ ಅಕ್ಷಯ್​ ಕುಮಾರ್​ ಪುರಾತತ್ವ ಶಾಸ್ತ್ರಜ್ಞನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಶೂಟಿಂಗ್​​ ಮುಂಬೈ ಹಾಗೂ ಅಯೋಧ್ಯೆಯಲ್ಲಿ ನಡೆಯಲಿದೆ ಎಂದು ಸಿನಿ ತಂಡ ಹೇಳಿದೆ. ಮುಂದಿನ ವರ್ಷದ ದೀಪಾವಳಿ ವೇಳೆಗೆ ಈ ಸಿನಿಮಾ ಅಭಿಮಾನಿಗಳ ಮುಂದಿಡಲು ಚಿತ್ರತಂಡ ಶ್ರಮ ವಹಿಸುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...