alex Certify ಪತ್ನಿ ಆತ್ಮಹತ್ಯೆ ಪ್ರಕರಣ: ನಟನ ಬಂಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಆತ್ಮಹತ್ಯೆ ಪ್ರಕರಣ: ನಟನ ಬಂಧನ

ದಿವಂಗತ ನಟ ರಾಜನ್ ಪಿ ದೇವ್ ಪುತ್ರ, ನಟ ಉನ್ನಿ ದೇವ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉನ್ನಿ ದೇವ್ ಕೊರೊನಾ ವರದಿ ನೆಗೆಟಿವ್ ಬರ್ತಿದ್ದಂತೆ ಉನ್ನಿಯನ್ನು ಬಂಧಿಸಲಾಗಿದೆ. ಪತ್ನಿ ಪ್ರಿಯಾಂಕಾ ಆತ್ಮಹತ್ಯೆ ಪ್ರಕರಣದಲ್ಲಿ ಉನ್ನಿಯನ್ನು ಬಂಧಿಸಲಾಗಿದೆ. ಉನ್ನಿ ದೇವ್ ಮಲಯಾಳಿ ನಟ.

ಎರ್ನಾಕುಲಂ ಜಿಲ್ಲೆಯಲ್ಲಿರುವ ಉನ್ನಿ ಮನೆಯಲ್ಲಿಯೇ ಬಂಧಿಸಲಾಗಿದೆ. ಉನ್ನಿ ಪತ್ನಿ ಪ್ರಿಯಾಂಕ ಮೇ 20ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಆಕೆ ಸಾವಿಗೆ ಹಿಂಸೆ ಕಾರಣವೆಂದು ಕುಟುಂಬಸ್ಥರು ದೂರು ಸಲ್ಲಿಸಿದ್ದರು. ಪ್ರಿಯಾಂಕ ಸಹೋದರನ ದೂರಿನ ಮೇರೆಗೆ ಉನ್ನಿ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ಆದ್ರೆ ಉನ್ನಿಗೆ ಕೊರೊನಾ ಬಂದ ಕಾರಣ ಬಂಧನವನ್ನು ಮುಂದೂಡಲಾಗಿತ್ತು.

2019ರಲ್ಲಿ ಉನ್ನಿ-ಪ್ರಿಯಾಂಕ ಮದುವೆಯಾಗಿದ್ದರು. ಪ್ರೇಮ ವಿವಾಹವಾಗಿದ್ದ ಜೋಡಿ ಆರಂಭದಲ್ಲಿ ಸರಿಯಾಗಿದ್ದರು. ಆ ನಂತ್ರ ಪ್ರಿಯಾಂಕ ಹಿಂಸೆ ಅನುಭವಿಸುತ್ತಿದ್ದಳು ಎನ್ನಲಾಗಿದೆ. ಪ್ರಿಯಾಂಕ ತವರಿಗೆ ಬರಲು ಮುಂದಾಗಿದ್ದಳಂತೆ. ಆದ್ರೆ ಅದ್ರ ಹಿಂದಿನ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ನಂತ್ರ ಪ್ರಿಯಾಂಕ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಉನ್ನಿ ತಂದೆ ರಾಜನ್ ಪಿ ದೇವ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...